ಸಜೀಪ ಮೂಡ: ಸುಭಾಷ್ ಯುವಕ ಮಂಡಲ ಸಜೀಪ ಮೂಡ 79ನೆಯ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಶುಭಾಷ್ ಯುವಕ ಮಂಡಲದ ಅಧ್ಯಕ್ಷ ಎಸ್. ಶ್ರೀಕಾಂತ್ ಶೆಟ್ಟಿ ನೆರವೇರಿಸಿದರು.
ಸ್ವಾತಂತ್ರ್ಯೋತ್ಸವದ ಮಹತ್ವವನ್ನು ಸಜಿಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ತಿಳಿಸಿದರು. ನಂದಾವರ ವಿನಾಯಕ ಶಂಕರ ನಾರಾಯಣ ದುರ್ಗಾಂಬ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ದೇವಿ ಪ್ರಸಾದ್, ಪೂoಜ ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್, ಶಾರದ ಪೂಜಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ , ಹಿರಿಯ ಪ್ರಾಥಮಿಕ ಶಾಲೆ ಸುಭಾಷ್ ನಗರ ಮುಖ್ಯೋಪಾಧ್ಯಾಯನೀ ವತ್ಸಲ, ಗ್ರಾಮ ಪಂಚಾಯಿತಿ ಸದಸ್ಯ ಯೋಗೀಶ್ ಬೆಲ್ಚಡ , ರಿಕ್ಷಾ ಚಾಲಕ ಮಾಲಕರು ಶಾಲಾ ವಿದ್ಯಾರ್ಥಿಗಳು ಶಿಕ್ಷಕಿಯರು ಉಪಸ್ಥಿತರಿದ್ದರು.

