ಬಿಳಿಯೂರು ಶಾಲೆ: 79ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

0
102

ಬಂಟ್ವಾಳ ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಬಿಳಿಯೂರು.ಇಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲಾಯಿತು. ಇಲ್ಲಿನ ಹಿರಿಯ ಹಳೆವಿದ್ಯಾರ್ಥಿ ಕಮಲಾ ರೈ ತಿಪ್ಪಕೋಡಿಯವರು ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಶಾಲೆಯ ಮುಖ್ಯಗುರುಗಳಾದ ಶೀಲಾ ಡಯಾನ ಮೋರಸ್ ಎಲ್ಲರನ್ನು ಸ್ವಾಗತಿಸಿ ವಿದ್ಯಾರ್ಥಿಗಳು ಗಣ್ಯರನ್ನು ಹೂಗುಚ್ಚ ನೀಡಿ ಬರಮಾಡಿಕೊಂಡರು.

ಈ ಶಾಲೆಯ ಶಿಕ್ಷಕರಾದ ರಾಜೇಂದ್ರ ವೈ ಪ್ರಾಸ್ತಾವಿಕ ನುಡಿಗಳ ಮೂಲಕ ಸ್ವಾತಂತ್ರ್ಯ ದಿನದ ಬಗ್ಗೆ ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ತಿಳಿ ಹೇಳಿದರು.ನಂತರ ಊರಿನ ಗಣ್ಯರು 79ನೇ ಸ್ವಾತಂತ್ರ್ಯ ದಿನಕ್ಕೆ ಶುಭ ನುಡಿಗಳ ಮೂಲಕ ಶುಭ ಹಾರೈಸಿದರು.ವಿದ್ಯಾರ್ಥಿಗಳಿಂದ ಭಾಷಣ ,ಸಮೂಹ ಗಾಯನ,ರಾಷ್ಟ್ರಭಕ್ತಿಗೀತೆ,ವಾದ್ಯ-ಘೋಷಗಳೊಂದಿಗೆ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.ಈ ಸಂದರ್ಭದಲ್ಲಿ.ಹಿರಿಯರಾದ ಶ್ರೀ ಚೆನ್ನಕೇಶವ,ಬಶೀರ್.ಕೊಡೆಂಚಡ್ಕ,ರಾಮಣ್ಣ ನಾಯ್ಕ್ ಬಿಳಿಯೂರು,ಉಸೈನ್ ಬಿಳಿಯೂರು,ಸತೀಶ್ ಬಿಳಿಯೂರು.ಸತೀಶ್ ಕರ್ವೆಲ್ .ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನಳಿನಿ ಮತ್ತು ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು, ಸರ್ವ ಸದಸ್ಯರು ಅಂಗನವಾಡಿ ಶಿಕ್ಷಕಿಯರು ಹಾಗೂ ಕಾರ್ಯಕರ್ತೆಯರು.ಊರಿನ ಗಣ್ಯರು ,ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.ಎಲ್ಲರಿಗೂ ಸಿಹಿತಿಂಡಿ ವಿತರಿಸಿಸಲಾಯಿತು.ಕಾರ್ಯಕ್ರಮವನ್ನು ಶಿಕ್ಷಕಿ ಅಶ್ವಿನಿ ನಿರೂಪಿಸಿ.ಶಿಕ್ಷಕಿ ಪ್ರತಿಮಾ ಧನ್ಯವಾದಗೈದರು.

LEAVE A REPLY

Please enter your comment!
Please enter your name here