ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಮತ್ತು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಮುದರಂಗಡಿ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ಅಂಬಾಗಿಲು ಅಮೃತ ಗಾರ್ಡನ್ ಆಡಿಟೋರಿಯಂನಲ್ಲಿ ಭಾನುವಾರ ನಡೆದ 11ನೇ ವರ್ಷದ ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸುಪ್ರಸಿದ್ದ ಗಾಯಕರಾದ ಶಂಕರ್ ಶಾನ್ ಬಾಗ್ ಬೆಂಗಳೂರು ಇವರಿಂದ ಶ್ರೀ ರಾಮನಾಮ ಸ್ಮರಣೇ ಭಕ್ತಿ ಗಾನ ಹಾಗೂ ವಂದೇ ಮಾತರಂ ದೇಶ ಭಕ್ತಿ ಗೀತೆಗಳನ್ನು ಹಾಡಿ ರಂಜಿಸಿದರು , ವೇದಿಕೆ ವತಿಯಿಂದ ಕಲಾವಿದರಿಗೆ ಗೌರವಾರ್ಪಣೆ ನಡೆಯಿತು.
ರಾಮಚಂದ್ರ ಅನಂತ್ ಭಟ್ , ವೇ . ಮೂ . ವಿಠ್ಠಲ್ ಭಟ್ ಮಂಗಳೂರು , ಸಿ ಎ ಸುಧೀರ್ ಪ್ರಭು ಬೆಂಗಳೂರು , ಹೋಟೆಲ್ ಉಧ್ಯಮಿ ಸಮಾಜ ಸೇವಕ ರಘುವೀರ್ ಶೆಣೈ ಆಂಧ್ರಪ್ರದೇಶ , ಬೋಗ್ ವಿದ್ಯಾಪೋಷಕ ನಿಧಿಯ ಅಧ್ಯಕ್ಷ ಸಿಎ ಎಸ್.ಎಸ್.ನಾಯಕ್ , ಸಿಎ ಗೋಪಾಲಕೃಷ್ಣ ಭಟ್ , ವಿನೋದ್ ಕಾಮತ್ ಕಲ್ಯಾಣಪುರ , ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಜಿ. ಸತೀಶ್ ಹೆಗ್ಡೆ ಕೋಟ , ಸಂಚಾಲಕ ಆರ್. ವಿವೇಕಾನಂದ ಶೆಣೈ , ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ , ಪದಾಧಿಕಾರಿಗಳು ಉಪಸ್ಥಿತರಿದ್ದರು.

