ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ ಸರ್ವಭಕ್ತರ ಮಹಾಸಭೆ
ಮುಲ್ಕಿ: ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ 2026 ನೇ ಮಾರ್ಚ್ ತಿಂಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಸರ್ವಭಕ್ತರ ಮಹಾಸಭೆ ಭಾನುವಾರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಭಗವತಿ ದೇವಸ್ಥಾನದ ಅರ್ಚಕ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ ಆಶೀರ್ವಚನ ನೀಡಿ, ಬ್ರಹ್ಮಕಲಶೋತ್ಸವದಿಂದ ಸಾನಿಧ್ಯ ಅಭಿವೃದ್ಧಿ ಜೊತೆಗೆ ಗ್ರಾಮದ ಅಭಿವೃದ್ಧಿ ಸಾಧ್ಯವಾಗಿದ್ದು ಊರ ಪರ ಊರ ಭಕ್ತಾಧಿಗಳು ಗ್ರಾಮಸ್ಥರು ಕೈಜೋಡಿಸಿ ಬೇಕು ಎಂದರು.
ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ವೃದ್ಧಿಯಾಗುತ್ತಿದ್ದು ಎಲ್ಲರಿಗೂ ಭಗವತಿ ಅನುಗ್ರಹ ಮಾಡಿದ್ದಾರೆ, ಕ್ಷೇತ್ರದ ಎಲ್ಲಾ ಭಕ್ತರು ಒಗ್ಗಟ್ಟಿನಿಂದ ಉತ್ಸಾಹದಿಂದ ಸೇರಿದರೆ ಮುಂದಿನ ವರ್ಷ ಮಾರ್ಚ ನಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಯಶಸ್ವಿಯಾಗಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಬ್ರಾಹ್ಮಣ ಸಮಾಜದ ಡಾ. ಶ್ರೀಕಾಂತ್ ರಾವ್, ಪದ್ಮಶಾಲಿ ಸಭಾದ ಉಮೇಶ್, ಬಿಲ್ಲವ ಸಮಾಜದ ದಯಾನಂದ ಗುರಿಕಾರ, ಕದಿಕೆ ಮೊಗವೀರ ಸಭಾದ ಗಿರೀಶ್ ಶ್ರಿಯಾನ್, ಲಚ್ಚಿಲ್ ಮೊಗವೀರ ಸಭಾದ ತಿಲಕ್ ಕರ್ಕೇರ, ಸಾರಂತಯ ಗರೋಡಿಯ ನಿರಂಜನ್ ಬಂಗೇರ ಹಾಗೂ ವಿವಿಧ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು, ದೇವಸ್ಥಾನದ ಕಾರ್ಯದರ್ಶಿ, ರಮೇಶ್ ಬಂಗೇರ ನಿರೂಪಿಸಿದರು.

