ಮಂಗಳೂರು: ಸ್ವಸ್ತಿಕಾ ನ್ಯಾಷನಲ್ ಬಿಸಿನೆಸ್ ಸ್ಕೂಲ್ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಮುಳಿಯ ಸಾತ್ವಿಕ್ ಅವರು ಆಯ್ಕೆಯಾಗಿದ್ದಾರೆ. ತಂಡದ ಸ್ನೇಹಿತರ ನಿರಂತರ ಬೆಂಬಲ ಹಾಗೂ ಸಹಕಾರದ ಫಲವಾಗಿ ಅವರು ಈ ಸ್ಥಾನಕ್ಕೆ ತಲುಪಿದ್ದಾರೆ.
ಅವರ ನಾಯಕತ್ವದಲ್ಲಿ ವಿದ್ಯಾರ್ಥಿ ಸಂಘವು ಕಾಲೇಜಿನ ವಿವಿಧ ಚಟುವಟಿಕೆಗಳಿಗೆ ಹೆಚ್ಚಿನ ಶಕ್ತಿ ನೀಡಲು, ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮತ್ತು ಚೈತನ್ಯಮಯ ವಾತಾವರಣವನ್ನು ನಿರ್ಮಿಸಲು ಬದ್ಧವಾಗಿದೆ.
ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸಾತ್ವಿಕ್ ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿ “ನನ್ನ ಗೆಲುವು ನನ್ನ ಒಬ್ಬರ ಪ್ರಯತ್ನವಲ್ಲ, ನನ್ನ ಸ್ನೇಹಿತರ ನಿಸ್ವಾರ್ಥ ಬೆಂಬಲದ ಫಲ. ವಿಶೇಷವಾಗಿ ಪ್ರೀತಂ, ವಿಪಿನ್, ನಿಖಿಲ್, ಗುರುಪ್ರಸಾದ್, ಶಮಿತ್, ಅದ್ವಿತ್, ಶ್ರೇಯಸ್, ನಿಶ್ಮಿತಾ ಮತ್ತು ಕೃತಿಕಾ – ಇವರು ಕೊಟ್ಟ ಶಕ್ತಿ ಮತ್ತು ಬೆಂಬಲವೇ ನನ್ನ ಜಯಕ್ಕೆ ಕಾರಣ” ಎಂದು ಹೇಳಿದರು.

