ಅ. 25ರಂದು ಬೈದೆರ್ಲೆ ದರ್ಶನದ ಪೂಜಾರಿಗಳು, ಗುರಿಕಾರರ ಸಮಾವೇಶ ಮತ್ತು ಸಮಾಲೋಚನಾ ಸಭೆ

0
8

ಉಡುಪಿ : ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.) ವತಿಯಿಂದ ಕಾಪು ತಾಲೂಕಿನ ಗರೋಡಿಗಳ ಪೂ-ಪೂಜನೆಯವರು, ಬೈದೆರ್ಲೆ ದರ್ಶನದ ಪೂಜಾರಿಯವರು ಹಾಗೂ ಕೂಡುಕಟ್ಟಿನ ಗುರಿಕಾರರ ಸಮಾವೇಶ ಮತ್ತು ಸಮಾಲೋಚನಾ ಸಭೆಯು ಅಕ್ಟೋಬರ್ 25ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಕಟಪಾಡಿಯ ಶ್ರೀ ವಿಶ್ವನಾಥ ಕ್ಷೇತ್ರದ ಸಪ್ತಪದಿ ಸಭಾಂಗಣದಲ್ಲಿ ನಡೆಯಲಿದೆ.

ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಧ್ಯಕ್ಷರು ಸುರ್ಯೋದಯ್‌ ಪೆರಂಪಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿಶ್ವನಾಥ ಕ್ಷೇತ್ರದ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರು, ಕುಕ್ಕೆಹಳ್ಳಿ ಒಳಮಡಿಯ ಹರೀಶ್ ಪೂಜಾರಿ, ಉದ್ಯಮಿಗಳಾದ ಎಸ್. ಕೆ. ಸಾಲ್ಯಾನ್, ರಾಜಶೇಖರ ಕೋಟ್ಯಾನ್ ಭಾಗವಹಿಸಲಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳಾಗಿ ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ. ಶುಕಾರಾಮ ಪೂಜಾರಿ, ಪಾಂಗಾಳ ಗುಡ್ಡೆ ಗರೋಡಿಯ ಸುಧಾಕರ ಡಿ. ಅಮೀನ್ ಹಾಗೂ ಪಾಂಗಾಳ ಸಾನದ ಮನೆಯ ಹರಿಶ್ಚಂದ್ರ ಪೂಜಾರಿ ಭಾಗವಹಿಸಲಿದ್ದಾರೆ.

ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಗೌರವಾಧ್ಯಕ್ಷರಾದ ದಾಮೋದರ ಕಲ್ಮಾಡಿ ಹಾಗೂ ಉಗ್ಲೆಲ್‌ಬೆಟ್ಟು ಶ್ರೀ ಬ್ರಹ್ಮ ಬೈದೇರು ಮತ್ತು ಚಿಕ್ಕಮ್ಮ ದೇವಿ ಗರೋಡಿಯ ಅಧ್ಯಕ್ಷರು ದಯಾನಂದ ಕರ್ಕೆರ ಗೌರವ ಉಪಸ್ಥಿತರಿರಲಿದ್ದಾರೆ.

ತುಳುನಾಡಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯೊಂದಿಗೆ ನಿಕಟ ಸಂಬಂಧ ಹೊಂದಿರುವ ಗರೋಡಿಗಳ ಪೂಜಾರಿಗಳು, ಬೈದೆರ್ಲೆ ದರ್ಶನದ ಪೂಜಾರಿಗಳು ಮತ್ತು ಕೂಡುಕಟ್ಟಿನ ಗುರಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.

ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಪದಾಧಿಕಾರಿಗಳಾದ ಸೂರ್ಯೋದಯ ಪೆರಂಪಳ್ಳಿ, ಎ. ಮಾಧವ ಉಡುಪಿ, ಮಹೇಶ್ ಎಸ್. ಸುವರ್ಣ, ದಾಮೋದರ ಕಲ್ಮಾಡಿ, ಹರೀಶ್ ಎಂ. ಕೆ. ಕಲ್ಯಾಡಿ ಹಾಗೂ ಕೆ. ಶೇಖರ ಪೂಜಾರಿ ಕಿದಿಯೂರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುತ್ತಿದ್ದಾರೆ.