ಆ. 22: ಮಂಗಳೂರಿನಲ್ಲಿ ವಿಶ್ವ ಜಾನಪದ ಆಚರಣೆ

0
167

ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಘಟಕ ಮತ್ತು ತಾಲೂಕು ಘಟಕಗಳ ಆಶ್ರಯದಲ್ಲಿ ವಿಶ್ವ ಜಾನಪದ ಆಚರಣೆ 2025 ಕಾರ್ಯಕ್ರಮವನ್ನು ಮಂಗಳೂರಿನ ಉರ್ವಸ್ಟೋರ್ ಬಳಿ ಇರುವ ಮಹಿಳಾ ಮಂಡಲಗಳ ಒಕ್ಕೂಟ ಸಭಾಂಗಣದಲ್ಲಿ ಆ. ೨೨ರಂದು ಸಂಜೆ 3 ಗಂಟೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಾನಪದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಮಂತ್ರಣ ಪತ್ರದ ಪ್ರಕಟಣೆಯಲ್ಲಿ ತಿಳಿಸಿದೆ.
ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಮತ್ತು ತಾಲೂಕು ಘಟಕದ ಎಲ್ಲಾ ಪದಾಧಿಕಾರಿಗಳು, ಅಧ್ಯಕ್ಷರುಗಳು ಸದಸ್ಯರುಗಳು ಉಪಸ್ಥಿತರಿರುವಂತೆ ಕೋರಲಾಗಿದೆ.
ಜಿಲ್ಲಾ ಜಾನಪದ ಘಟಕದ ವತಿಯಿಂದ ಏರ್ಪಡಿಸಲಾದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಘಟಕದ ವತಿಯಿಂದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜನಪದ ಸಂಬಂಧಿತ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಜಾನಪದ ಸಂಭ್ರಮಾಚರಣೆಯಲ್ಲಿ ಜಾನಪದ ಆಸಕ್ತ ಸಾರ್ವಜನಿಕರನ್ನು ಪ್ರೀತಿ ಪೂರಕವಾಗಿ ಜಿಲ್ಲಾ ಜಾನಪದ ಘಟಕದ ವತಿಯಿಂದ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಘಟಕ ಹಾಗೂ ರಾಜೇಶ್ ಸ್ಕೈಲಾರ್ಕ್ ಪ್ರಧಾನ ಕಾರ್ಯದರ್ಶಿ ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಪರಿಷತ್ತು ಇವರು ಆಮಂತ್ರಣ ಪತ್ರಿಕೆ ಮುಖಾಂತರ ನಮ್ಮ ವರದಿಗಾರರಿಗೆ ಮಾಹಿತಿ ನೀಡಿದ್ದಾರೆ.

ವರದಿ: ಮಂದಾರ ರಾಜೇಶ್ ಭಟ್

LEAVE A REPLY

Please enter your comment!
Please enter your name here