ಕಡಬ: ಶ್ರೀ ಲಕ್ಷ್ಮೀ ನರಸಿಂಹ ಭಜನ ಮಂಡಳಿ (ರಿ.) ಕಾಣಿಯೂರು ಇದರ ವತಿಯಿಂದ ೩೮ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ. ೨೭ಮತ್ತು ೨೮ರಂದು ನಡೆಯಲಿದೆ.
ಆ. ೨೭ರಂದು ಬೆಳಿಗ್ಗೆ ಮಹಾಗಣಪತಿ ಪ್ರತಿಷ್ಠೆ, ಸಾಮೂಹಿಕ ಗಣಹೋಮ ನಡೆಯಲಿದೆ. ಚುಕ್ಕಿ ರಂಗೋಲಿ ಸ್ಪರ್ಧೆ, ಗಣಪತಿ ದೇವರ ಚಿತ್ರ ಬಿಡಿಸುವ ಸ್ಪರ್ಧೆ, ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನದ ಬಳಿಕ ಭಕ್ತಿಗೀತೆ, ಭಜನೆ ನಡೆಯಲಿದೆ. ರಾತ್ರಿ ೮ ರಿಂದ ನಡೆಯುವ ಧಾರ್ಮಿಕ ಸಭೆಯ ಅಧ್ಯಕ್ಷತೆ ಯನ್ನು ಚಿದಾನಂದ ಉಪಾಧ್ಯಾಯ ವಹಿಸಲಿದ್ದು, ಕರುಣಾಕರ ಉಪಾಧ್ಯಾಯ ಧಾರ್ಮಿಕ ಭಾಷಣ ಮಾಡಲಿದ್ದಾರೆ. ವಿವಿಧ ಅತಿಥಿಗಳು ಸಭೆಯಲ್ಲಿ ಭಾಗವಹಿಸಲಿದ್ದು, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಆ. ೨೮ರಂದು ಬೆಳಿಗ್ಗೆ ಮಹಾಪೂಜೆ , ಗಣಹೋಮ, ಭಜನೆ, ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರ,ಮಗಳ ಬಳಿಕ ವೈಭವದೊಂದಿಗೆ ವಿಗ್ರಹ ವಿಸರ್ಜನೆ ನಡೆಯಲಿದೆ. ಆ. ೨೭ರಂದು ವಿಶೇಷವಾಗಿ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಲಿದೆ.

