ಭಾಷಾಂತರ ಕೃತಿ ‘’ಏಕ ಬಹಾದ್ದೂರಾಚಿ ಶೌರ್ಯ ಕಥಾ” ಪುಸ್ತಕ ಲೋಕಾರ್ಪಣೆ

0
73

“ಕಾಶ್ಮೀರದ ಪೂಂಚ್ -ರಾಜೌರಿ ಪ್ರದೇಶದಲ್ಲಿ ಒಮ್ಮೆ ಭಯೋತ್ಪಾದಕರು ಒಳನುಗ್ಗಿದರೆ ಕೆಲವೇ ಗಂಟೆಗಳೊಳಗೆ  ಕಾಡಿನೊಳಗೆ  ಸೇರಿ ಬಹಳ ಅಪಾಯ ತಂದೊಡ್ಡುತ್ತಾರೆ ಆದುದರಿಂದ  ಈ ನುಸುಳುವಿಕೆಯ  ಆರಂಭದ ಸಣ್ಣ ಅವಧಿಯೊಳಗೆ ಅವರನ್ನು ಸದೆಬಡಿಯ ಬೇಕಾಗುತ್ತದೆ. ಇಂತಹ ಒಂದು ತುರ್ತು ಕಾರ್ಯಾಚರಣೆಯ ವೇಳೆ ಯುವ ಭೂಸೇನಾಧಿಕಾರಿ ಮರಣೋತ್ತರ ಶೌರ್ಯ ಚಕ್ರ ವಿಜೇತ ಲೆಫ್ಟಿನೆಂಟ್ ಕರ್ನಲ್ ಅಜಿತ ಭಂಡಾರಕಾರ  ತಮ್ಮ ಸೀಮಿತ ಸೈನ್ಯ ಬಲದಿಂದ ಇಬ್ಬರು ಉಗ್ರರನ್ನು ಕೊಂದು ಇತರರ ಮೇಲೆ ಗ್ರೇನೇಡ್ ಗುರಿ ಇಡುವಾಗಲೇ ಶತ್ರುಗಳ ಗುಂಡಿಗೆ ಬಲಿಯಾದರು. ಈ ರೀತಿ ತನ್ನ 39 ರ ಹರೆಯದಲ್ಲಿಯೇ ದೇಶಕ್ಕಾಗಿ ಪ್ರಾಣಾರ್ಪಣೆ ಗೆಯ್ದ ಅಜಿತ್ ನನಗಿಂತ ಮೇಲ್ಪಂಕ್ತಿ ಪಡೆಯುತ್ತಾರೆ” ಎಂದು ಲೆಫ್ಟಿನೆಂಟ್ ಜನರಲ್ ಸೇನಾಧಿಕಾರಿ ಹುದ್ದೆಯಲ್ಲಿ ನಿವೃತ್ತಿ ಪಡೆದಿರುವ  ಲೇ.ಜ ಪಿಜಿ ಕಾಮತ್ ರವರು ಅಭಿಪ್ರಾಯ ಪಟ್ಟರು.

ಅವರು ವಿಶ್ವ ಕೊಂಕಣಿ ಕೇಂದ್ರದಲ್ಲಿ ದಿ. ಲೆ.ಕ ಅಜಿತ ರವರ ಜೀವನ ಸಾಧನೆಯ ಬಗ್ಗೆ ಅವರ ಧರ್ಮ ಪತ್ನಿ ಶಕುಂತಲಾ ಅಜಿತ ಭಂಡಾರಕಾರ ಇವರು ಬರೆದ “ ದ ಸಗಾ ಆಫ್ ಎ ಬ್ರೇವ್ ಹಾರ್ಟ್” ಪುಸ್ತಕದ ಕೊಂಕಣಿ ಭಾಷಾಂತರ ಕೃತಿ ‘’ಏಕ ಬಹಾದ್ದೂರಾಚಿ ಶೌರ್ಯ ಕಥಾ” ಪುಸ್ತಕವನ್ನು ಲೋಕಾರ್ಪಣೆ ಮಾಡುವ ಸಂಧರ್ಭದಲ್ಲಿ,  “ಪತಿಯ ಅಗಲುವಿಕೆಯ ನಡುವೆ ತನ್ನ ಎರಡೂ ಮಕ್ಕಳನ್ನು ಭಾರತೀಯ ಭೂಸೇನೆ ಹಾಗೂ ಭಾರತೀಯ ನೌಕಾ ಪಡೆಯ ಸೇವೆಗಾಗಿ ಕಳುಹಿಸಿ ಕೊಟ್ಟ ಓರ್ವ ಆದರ್ಶ  ವೀರ ಮಾತೆ ಎನಿಸುತ್ತಾರೆ”.  ಎಂದು ಶಕುಂತಲಾ ಭಂಡರಕರ  ರವರ ಬಗ್ಗ್ಗೆ ಹೆಮ್ಮೆ ವ್ಯಕ್ತ ಪಡಿಸಿದರು. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗೋವಾದ ಹೆಸರಾಂತ ಅನುವಾದಕ ರಮೇಶ ಲಾಡ ರವರ ಭಾಷಾ ಪ್ರೌಢಿಮೆಯನ್ನು ಕಾರ್ಯದರ್ಶಿ ಡಾ ಕಸ್ತೂರಿ ಮೋಹನ ಪೈ ಯವರು ಬರಹದ ಸಾಲುಗಳನ್ನು ಉಲ್ಲೇಖಿಸಿ ಪ್ರಶಂಶಿಸಿದರು.  

ದುಃಖ ತಪ್ತೆಯಾಗಿದ್ದರೂ “ಕರ್ತವ್ಯಗತ ಮರಣಹೆಂ ಶೌರ್ಯ ಲಕ್ಷಣ” ಎಂಬ ಮಾತಿನಂತೆ ತಾನು ವೀರ ನಾರಿಯರಿಗಾಗಿ ಸಂಘಟನೆ ಕಟ್ಟಿ ದುಡಿಯುತ್ತಿರುವುದಾಗಿ ಶಕುಂತಲಾ ಭಂಡಾರ್ಕರ ತಮ್ಮ ನುಡಿಗಳಲ್ಲಿ ತೃಪ್ತಿ ವ್ಯಕ್ತ ಪಡಿಸಿದರು.  ಪುಸ್ತಕ ಪ್ರಕಾಶನ ಸಂಸ್ಥೆ ಸಂಜನಾ ಪ್ರಕಾಶನ್ ಗೋವಾ ಇದರ ಪರವಾಗಿ ಅನಂತ ಅಗ್ನಿಯವರು ಮಾತಾಡಿದರು.  

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ ಎ ನಂದ ಗೋಪಾಲ ಶೆಣೈಯವರು ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಕೇಂದ್ರದ ಉಪಾಧ್ಯಕ್ಷರಾದ ವಿಲಿಯಂ ಡಿಸೋಜಾ, ರಮೇಶ ಡಿ ನಾಯಕ್, ಟ್ರಸ್ಟಿಗಳಾದ ಗಿಲ್ಬರ್ಟ್ ಡಿಸೋಜಾ, ವತಿಕಾ ಕಾಮತ್, ಆಡಳಿತ ಅಧಿಕಾರಿ ಡಾ. ಬಿ. ದೇವದಾಸ ಪೈ ಹಾಗೂ  ಪೂರ್ಣಾನಂದ ಸೇವಾ ಪ್ರತಿಷ್ಠಾನ, ಕೊಂಕಣಿ ಕುಡುಬಿ ಸಂಘದ ಪದಾಧಿಕಾರಿಗಳು ಇತರ ಗಣ್ಯರು ಉಪಸ್ಥಿತರಿದ್ದರು. ಸುಚಿತ್ರಾ ಎಸ್ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಬಿ ಆರ್ ಭಟ್ ಇವರು ಧನ್ಯವಾದ ಸಮರ್ಪಣೆ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here