ಮೂಡುಬಿದಿರಿಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ, ಇಲಿ ಜ್ವರ!

0
138

ಮೂಡುಬಿದಿರೆ: ಸುತ್ತಮುತ್ತಲಿನ ಪ್ರದೇಶಗಳ ಜನರ ಬೇಕಾಬಿಟ್ಟಿ ವರ್ತನೆಯಿಂದಾಗಿ ಮೂಡುಬಿದಿರೆಯಲ್ಲಿ ವಿವಿಧ ಜ್ವರಗಳ ಹಾವಳಿ ವಿಪರೀತವಾಗಿದೆ.

ಮೂಡುಬಿದಿರೆ ಮಾರುಕಟ್ಟೆ ಪ್ರದೇಶ, ಆಳ್ವಾಸ್ ಆಸ್ಪತ್ರೆಯ ಪರಿಸರ, ಪುರಸಭೆಯ ಹಾಗೂ ಬೇರೆ ಬೇರೆ ಗ್ರಾಮ ಪಂಚಾಯತಿಗಳ ನಡುವಿನ ಪ್ರದೇಶಗಳಲ್ಲಿ ಕಲಿತ ಜನರೇ ಎಸೆಯುತ್ತಿರುವ ಕೊಳಕು ಕಶ್ಮಲಗಳಿಂದಾಗಿ ವಿವಿಧ ಜ್ವರ ಇತ್ಯಾದಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಇದರಿಂದ ಸ್ವತಹ ನಾಗರಿಕರೇ ತೊಂದರೆಯನ್ನು ಪಡುತ್ತಿದ್ದರೂ ಕೂಡ ಕಂಡ ಕಂಡಲ್ಲಿ ಕಸವನ್ನು ಎಸೆದು ಬೇಕಾಬಿಟ್ಟಿಯಾಗಿ ವರ್ತನೆ ಮಾಡುತ್ತಿರುವುದು ಕಂಡು ಬರುತ್ತಿದೆ. ಈ ಬಗ್ಗೆ ಪುರಸಭೆಯವರು ಹಾಗೂ ಗ್ರಾಮ ಪಂಚಾಯತ್ ಸಭೆಗಳಲ್ಲಿ ನಾಗರಿಕರಿಗೆ ಸಾಕಷ್ಟು ಎಚ್ಚರಿಕೆಯನ್ನು ನೀಡಿದ್ದರೂ ಕೂಡ ಯಾವುದೇ ಉಪಯೋಗ ಆಗಿರುವುದಿಲ್ಲ.
ಇನ್ನಾದರೂ ನಾಗರಿಕರು ತಮ್ಮ ಬೈಕು, ಕಾರು, ಲಾರಿ, ವ್ಯಾನ್ ಇತ್ಯಾದಿಗಳಲ್ಲಿ ಚಲಿಸುತ್ತಾ ತೋಡು, ಸಂಕ, ಸೇತುವೆಯಲ್ಲಿ, ಬೀದಿಯ ಬದಿಗಳಲ್ಲಿ ಪ್ಲಾಸ್ಟಿಕ್ ತೊಟ್ಟೆಗಳಲ್ಲಿ ಕೊಳಚೆ ಕಶ್ಮಲಗಳನ್ನು ಎಸೆಯುವುದನ್ನು ನಿಲ್ಲಿಸಬೇಕಾಗಿದೆ. ಈ ಬಗ್ಗೆ ಸಿಸಿಟಿವಿಯ ಮೂಲಕ ಪುರಸಭೆಯವರು ಹಾಗೂ ಪಂಚಾಯತ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here