ಪಡುಕುಡೂರು : ಕಾರ್ಕಳದ ಕೊಳಕೆ ಇರ್ವತ್ತೂರು ಶಾಲೆಯಲ್ಲಿ 2025-26 ನೇ ಸಾಲಿನ ಕಾರ್ಕಳ ತಾಲ್ಲೂಕು ಮಟ್ಟದ 14 ವಯೋಮಾನ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ತಂಡವು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ಸತತ ಎರಡನೇ ಬಾರಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕೀರ್ತಿಯು ಪಡುಕುಡೂರು ಶಾಲೆಗೆ ಸಲ್ಲುತ್ತದೆ. ತಂಡದ ಕಪ್ತಾನೆ ದೀಕ್ಷಾ ಬೆಸ್ಟ್ ಅಟೇಕರ್ ಮತ್ತು ಉಪ ಕಪ್ತಾನೆ ಸುಚಿತಾ ಬೆಸ್ಟ್ ಪಾಸರ್ ಪ್ರಶಸ್ತಿಯನ್ನು ಪಡೆದರು. ಪ್ರಣೀತಾ, ಅನನ್ಯಾ, ಸಾನ್ವಿಕಾ, ಶ್ರಮಿಕಾ, ಸಾಕ್ಷಿ, ಐಶ್ವರ್ಯ, ದೀಕ್ಷಿತಾ, ಸುತಿ, ಸಮೃದ್ಧಿ, ಧನ್ವಿ ಉತ್ತಮ ಆಟದ ಪ್ರದರ್ಶನಗೈದರು. ಮುಖ್ಯ ಶಿಕ್ಷಕ ಹರೀಶ್.ಪೂಜಾರಿ.ಎಸ್ ಅವರ ನಿರಂತರ ತರಬೇತಿ ಮತ್ತು ಮಾರ್ಗದರ್ಶನದಿಂದ ಯಶಸ್ಸು ಸಾಧ್ಯವಾಗಿದೆ. ಶಿಕ್ಷಕಿಯರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ಉಪಾಧ್ಯಕ್ಷ ಹರೀಶ ಪೂಜಾರಿ, ಸದಸ್ಯರು, ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಪಡುಪರ್ಕಳ ಹರೀಶ ಶೆಟ್ಟಿ, ಅಧ್ಯಕ್ಷ ಪ್ರಸನ್ನ ಶೆಟ್ಟಿ, ಪದಾಧಿಕಾರಿಗಳು, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಭಾರವಿ ಶೆಟ್ಟಿ ಮತ್ತು ಪದಾಧಿಕಾರಿಗಳು ಹಾಗೂ ಪಡುಕುಡೂರಿನ ವಿದ್ಯಾಭಿಮಾನಿಗಳು ವಿಧ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.

