ಮಂಜೇಶ್ವರ: ಜ್ಞಾನೋದಯ ಸಮಾಜದ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದೈಗೋಳಿ ನೇತೃತ್ವದಲ್ಲಿ ನಡೆಯಲಿರುವ 45ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಆ.9ರಂದು ದೈಗೋಳಿ ಶ್ರೀ ಗಣೇಶ ಮಂದಿರದಲ್ಲಿ ನಡೆಯಿತು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಹಾಗೂ ವೇದಮೂರ್ತಿ ವಿದ್ವಾನ್ ರಾಮಮೂರ್ತಿ ಕುರಿಯರ್ ಅವರ ಪೌರೋಹಿತ್ಯದಲ್ಲಿ ಸೆ.14ರಂದು ಸೋಮವಾರ ದೈಗೋಳಿ ಶ್ರೀ ಗಣೇಶ ಮಂದಿರದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗಣೇಶೋತ್ಸವ ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗಣೇಶೋತ್ಸವ ಸಮಿತಿ ಅಧ್ಯಕ್ಷ ತಿಲಕ್ ಪ್ರಸಾದ್ ಅಡೆಕಲಕಟ್ಟೆ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳಾದ ಬಿ.ವಿ. ರಾಜಗೋಪಾಲ, ಸತ್ಯನಾರಾಯಣ ಭಟ್, ಬಜೆ ವೆಂಕಟ್ರಮಣ ಭಟ್, ಗೋಪಾಲಕೃಷ್ಣ ಭಟ್ ಪಾರೆಕುಂಡಡ್ಕ, ಚಂದ್ರಹಾಸ ಹೆಬ್ಬಾರ್, ಮಾಧವ ನೀರಳಿಕೆ, ಬಾಬು ಮೂಲ್ಯ, ಡಾ. ವಿಜಯಲಕ್ಷ್ಮೀ ಶರ್ಮಾ, ಜಗನ್ನಾಥ ಎಂ., ಕೃಷ್ಣ ಸಾಯಿ ನಿಲಯ ಹಾಗೂ ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಮಾಧವ ಶೆಟ್ಟಿಗಾರ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಸುಧೀರ್ ರಂಜನ್ ವಂದಿಸಿದರು.

