ದೇಶದ ಆರ್ಥಿಕತೆಯಲ್ಲಿ ಎಲ್​ಐಸಿ ಪಾತ್ರ ಅಪಾರ

0
214


ಉಡುಪಿ: ಭಾರತೀಯರ ವಿಮಾ ರಕ್ಷಣೆ ಜೊತೆಗೆ ಮೂಲಭೂತ ಸೌಕರ್ಯ ವೃದ್ಧಿಯಲ್ಲಿ ಭಾರತೀಯ ಜೀವವಿಮಾ ನಿಗಮ ಕೊಡುಗೆ ಅಪಾರವಾಗಿದೆ ಎಂದು ಎಲ್​ಐಸಿ ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ಗಣಪತಿ ಎನ್​. ಭಟ್​ ಹೇಳಿದರು.
ಸೋಮವಾರ ಅಜ್ಜರಕಾಡು ಎಲ್​ಐಸಿ ಕಚೇರಿಯಲ್ಲಿ 69ನೇ ವಿಮಾ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಕಳೆದ ಏಳು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಎಲ್​ಐಸಿ ದೇಶದ ನಂ.1 ವಿಶ್ವಾಸಾರ್ಹ ವಿಮಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಕರ್ಣಾಟಕ ಬ್ಯಾಂಕ್​ ಎಜಿಎಂ ವಾದಿರಾಜ ಭಟ್​ ಮತ್ತು ಆಕ್ಸಿಸ್​ ಬ್ಯಾಂಕ್​ ಕ್ಲಸ್ಟರ್​ ಹೆಡ್​ ಸುರೇಶ್​ ಶುಭ ಹಾರೈಸಿದರು. ಮಾರುಕಟ್ಟೆ ಪ್ರಬಂಧಕ ಬಿಜು ಜೋಸೆಫ್​ ಸ್ವಾಗತಿಸಿದರು. ಉಪಪ್ರಬಂಧಕ ಶ್ಯಾಮಸುಂದರ್​ ವಂದಿಸಿದರು. ಶರತ್​ ಕುಮಾರ್​ ನಿರೂಪಿಸಿದರು. ವಿಮಾ ಸಪ್ತಾಹ ಅಂಗವಾಗಿ ವಿವಿಧ ಸಾಮಾಜಿಕ ಕಾರ್ಯಗಳು ನಡೆಯಲಿದೆ.

LEAVE A REPLY

Please enter your comment!
Please enter your name here