ಹಳೆಯಂಗಡಿ: ಮುಹಿಯದ್ದೀನ್ ಜುಮ್ಮಾ ಮಸೀದಿ ಬೊಳ್ಳೂರು ಇದರ ವತಿಯಿಂದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನ ಪ್ರಯುಕ್ತ ಈದ್ ಮಿಲಾದ್ ಮೆರವಣಿಗೆ ನೆರವೇರಿತು.
ಬೊಳ್ಳೂರು ಉಸ್ತಾದ್ ಹಾಜಿ ಅಲ್ ಹಝ್ಹರ್ ಫೈಝಿ ಅವರು ದುವಾ-ಆಶೀರ್ವಚನದ ಮೂಲಕ, ಅಬ್ದುಲ್ ನಾಸಿರ್ ಅಮ್ದಾನಿ ಹಾಗೂ ಮೊಹಮ್ಮದ್ ಷರೀಫ್ ಅರ್ಶಾದಿ’ ಅವರುಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಸೀದಿಯ ಅಧ್ಯಕ್ಷರಾದ ಬಿ.ಮೊಹಮ್ಮದ್, ಕಾರ್ಯದರ್ಶಿ ಹುಸೇನಬ್ಬ ಬೊಳ್ಳೂರು, ಅಝೀಝ್ ಐ.ಎ.ಕೆ, ಎಮ್.ಎ.ಕಾದರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು, ಮೋಯ್ದೀನ್ ಇಂದಿರಾನಗರ ಇವರು ಮಿಲಾದ್ ರ್ಯಾಲಿಗೆ ನೇತೃತ್ವ ನೀಡಿದರು.

