ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಶ್ರೀ ನಾರಾಯಣ ಗುರು ಜಯಂತಿಯನ್ನು ಭಕ್ತಿ ಮತ್ತು ಗೌರವದಿಂದ ಆಚರಿಸಲಾಯಿತು.
ಬಿಜೆಪಿ ಮಂಡಲಾಧ್ಯಕ್ಷ ನವೀನ್ ನಾಯಕ್, ಉಪಾಧ್ಯಕ್ಷರಾದ ಅನಂತಕೃಷ್ಣ ಶೆಣೈ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾದ ಪ್ರಸಾದ್ ಐಸಿರ, ನಿರಂಜನ್ ಜೈನ್, ಪ್ರಶಾಂತ್ ಕೋಟ್ಯಾನ್, ಅಶೋಕ್ ಸುರ‍್ಣ, ರಾಮಚಂದ್ರ ನಾಯಕ್, ರವೀಂದ್ರ ಮೊಯಿಲಿ, ಪ್ರಕಾಶ್ ರಾವ್, ಸುರೇಶ್ ಕಾಬೆಟ್ಟು, ಭಾರತಿ ಅಮೀನ್, ಮೀನಾಕ್ಷಿ ಗಂಗಾಧರ್, ನಗರ ಮಹಿಳಾ ಮರ‍್ಚಾದ ಅಧ್ಯಕ್ಷರು ಮತ್ತಿತರ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಮತ್ತು ಸ್ಥಳೀಯರು ಭಾಗವಹಿಸಿ ಗುರುಗಳು ಸಾಮಾಜಿಕ ಸುಧಾರಣೆ ಹಾಗೂ ಸಮಾನತೆಗಾಗಿ ನೀಡಿದ ಅಮೂಲ್ಯ ಸೇವೆಯನ್ನು ಪುಷ್ಪಾರ್ಚನೆಗೈದು ಸ್ಮರಿಸಿದರು.

