ಮೂಡುಬಿದಿರೆಯಲ್ಲಿ ಸಿಪಿಐಎಂನಿಂದ ಜನಪರ ನೀತಿಗಳ ಜಾರಿಗಾಗಿ ಒತ್ತಾಯ

0
165

ಕಳೆದ ಹಲವಾರು ವರ್ಷಗಳಿಂದ ಸ್ವತಹ ದುಡಿದು ತಮ್ಮ ಬದುಕು ನಡೆಸುತ್ತಿರುವ ಕಾರ್ಮಿಕರಿಗೆ ಇತ್ತೀಚಿನ ದಿನಗಳಲ್ಲಿ ಸಿಗಬೇಕಿರುವ ಮೂಲ ಸೌಲಭ್ಯಗಳು ದೊರಕದೆ ತೊಂದರೆಯನ್ನು ಪಡುತ್ತಿದ್ದಾರೆ. ಕಟ್ಟಡ ಕಾರ್ಮಿಕರು ಹಾಗೂ ಇತರ ಎಲ್ಲಾ ವಿಧದ ಕಾರ್ಮಿಕರಿಗೂ ಕೂಡ ಬದುಕು ದುರ್ಭರವಾಗಿದೆ. ಪರಿಸ್ಥಿತಿ ಹೀಗಿರುವಾಗ ಅವರ ಜೀವನ ನಿರ್ವಹಣೆ ಮಾಡುವುದೇ ಕಷ್ಟಕರವಾಗಿದೆ. ಆದುದರಿಂದ ಕಾರ್ಮಿಕರು ಹಾಗೂ ಬಡವರಿಗೆ ಸಹಾಯವಾಗುವಂತಹ ಜನಪರ ನೀತಿಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಮೂಡುಬಿದಿರೆ ಸಮಾಜ ಮಂದಿರದಲ್ಲಿ ರಾಜಕೀಯ ಸಮಾವೇಶವನ್ನು ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿಯ ಮೂಡುಬಿದಿರೆ ತಾಲೂಕು ಸಮಿತಿ ಹಮ್ಮಿಕೊಂಡಿತು.
ಸಮಾವೇಶವನ್ನು ಉದ್ದೇಶಿಸಿ ಜನಪದ ನೀತಿಯನ್ನು ಜಾರಿಗೆ ತರಲು ಒತ್ತಾಯಿಸಿ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ಕೆ ಯಾದವ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ, ಕಟ್ಟಡ ಕಾರ್ಮಿಕರ ಕಾರ್ಯದರ್ಶಿ, ಶಂಕರ ವಾಲ್ಪಾಡಿ, ಮಾತನಾಡಿದರು.
ಸಿಪಿಐಎಂ ತಾಲೂಕು ಸಮಿತಿಯ ಕಾರ್ಯದರ್ಶಿ, ರಮಣಿ ಅಧ್ಯಕ್ಷೀಯ ಭಾಷಣವನ್ನು ಮಾಡಿ ಸರಕಾರ ಜನಪರ ನೀತಿಯನ್ನು ಅನುಸರಿಸಿ ಬಡವರು ಹಾಗೂ ಕಾರ್ಮಿಕರಿಗೆ ಸಹಾಯ ಹಸ್ತವನ್ನು ಚಾಚ ಬೇಕೆಂದು ಒತ್ತಾಯಿಸಿದರು. ವೇದಿಕೆಯಲ್ಲಿ ಕೃಷ್ಣಪ್ಪ ಬೆಳುವಾಯಿ, ಜನವಾದಿ ಸಂಘಟನೆಯ ಲಕ್ಷ್ಮಿ, ಬೇಬಿ, ಪದ್ಮಾವತಿ ಹಾಜರಿದ್ದರು. ಸಂಚಾಲಕಿ ಗಿರಿಜಾ ಸ್ವಾಗತಿಸಿದರು. ದಲಿತ ಹಕ್ಕುಗಳ ಸಂಚಾಲಕ ಕೃಷ್ಣಪ್ಪ ಕೊಣಾಜಿ, ಧನ್ಯವಾದ ಸಲ್ಲಿಸಿದರು.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here