‘ಯುವಜನತೆಯೇ ದೇಶದ ಶಕ್ತಿ. ಇಂತಹ ಯುವಶಕ್ತಿ ಸಮಾಜಕ್ಕಾಗಿ ಸೇವೆ ಸಲ್ಲಿಸಬೇಕು. ಎನ್.ಎಸ್.ಎಸ್, ರೆಡ್‌ಕ್ರಾಸ್ ಮುಂತಾದ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಜವಾಬ್ದಾರಿ ಹಾಗೂ ನಾಯಕತ್ವ ಗುಣಗಳನ್ನು ಕಲಿಸಿಕೊಡುತ್ತದೆ. ಇಂತಹ ವೇದಿಕೆಗಳು ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿಸುತ್ತದೆ’ ಎಂಬುದಾಗಿ ಜೇಸಿ ತ್ರಿಭುವನ ಮೂಡಬಿದಿರೆಯ ಅಧ್ಯಕ್ಷೆ ಹಾಗೂ ರಾಷ್ಟ್ರೀಯ ತರಬೇತುದಾರರಾಗಿರುವ ವರ್ಷಾಕಾಮತ್ ತಿಳಿಸಿದರು.
ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನ 2025-26 ನೇ ಸಾಲಿನ ಪಠ್ಯೇತರ ಚಟುವಟಿಕೆಗಳನ್ನು ಉಧ್ಘಾಟಿಸಿ ಮಾತನಾಡಿದರು. ವೈಬ್ರಂಟ್ ಪಿಯುಕಾಲೇಜಿನಆಂಗ್ಲ ವಿಭಾಗ ಮುಖ್ಯಸ್ಥ ಹರೀಶ್ ನಂಬಿಯಾರ್ ಅತಿಥಿಗಳಾಗಿ ಭಾಗವಹಿಸಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಅಧ್ಯಕ್ಷತೆ ವಹಿಸಿ, ‘ಇಂತಹ ವೇದಿಕೆಗಳು ನಿಮಗೆ ಮುಂದಿನ ಭವಿಷ್ಯಕ್ಕೆ ಸಹಕಾರಿಯಾಗುತ್ತವೆ. ನಿಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಈ ವೇದಿಕೆ ಅವಕಾಶ ಮಾಡಿಕೊಡುತ್ತದೆ. ಈ ಘಟಕಗಳಲ್ಲಿ ಚುರುಕಿನಿಂದ ಭಾಗವಹಿಸಿದರೆ ಮಾತ್ರಎಲ್ಲಾ ಪ್ರಯೋಜನಗಳು ಲಭಿಸುತ್ತದೆ’ಎಂಬುದಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಹರೀಶ್, ಎನ್.ಎಸ್.ಎಸ್‌ಅಧಿಕಾರಿ ಶಾರದಾ, ಯುವ ರೆಡ್‌ಕ್ರಾಸ್ ಅಧಿಕಾರಿ ಶ್ರೀಗೌರಿ, ರೇಂಜರ್ಸ್ಅಧಿಕಾರಿ ಅರುಣ, ರೋವರ್ಸ್ಅಧಿಕಾರಿ ಸಂದೀಪ್ ಹಾಗೂ ಎಲ್ಲಾ ಘಟಕಗಳ ವಿದ್ಯಾರ್ಥಿ ಪ್ರತಿನಿಧಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ವನಿತಾ ಸ್ವಾಗತಿಸಿ, ಭರತ್ ವಂದಿಸಿದರು. ಕಾಂಚನ್ ಮನಿಶಾ ಕಾರ್ಯಕ್ರಮ ನಿರೂಪಿಸಿದರು.

