ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿಗೆ ಕಸ ಎಸೆದ ವ್ಯಕ್ತಿಯನ್ನು ಪತ್ತೆ ಹಚ್ಚಿ ದಂಡ ವಿಧಿಸಲಾದ ಅಪರೂಪದ ಘಟನೆ ನಡೆದಿದೆ.
ವೇದವ್ಯಾಸ ಕಾರ್ಕಳ ಎಂಬವರು ವಾಹನದಲ್ಲಿ ಸಂಚರಿಸುತ್ತ ಸೇತುವೆ ಮೇಲಿನಿಂದ ನದಿಗೆ ಕಸವನ್ನು ಎಸೆದಿದ್ದರು. ಆ ದೃಶ್ಯವನ್ನು ಸ್ಥಳೀಯರೋರ್ವರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡಿದ್ದರು.
ಗ್ರಾಮ ಪಂಚಾಯತ್‌ನವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ವಾಹನ ಮಾಲಕರನ್ನು ಪತ್ತೆಹಚ್ಚಿದರು. ಬಳಿಕ ಗ್ರಾ.ಪಂ. ವ ತಿಯಿಂದ ಆರೋಪಿಗೆ 2,000 ರೂ. ದಂಡ ವಿಧಿಸಲಾಗಿದೆ.

