ಜೆಸಿಐ ಮುಲ್ಕಿ ಶಾಂಭವಿ ಸಂಸ್ಥೆಯ 42ನೇ ವರ್ಷದ ಜೇಸಿ ಸಪ್ತಾಹಕ್ಕೆ ಚಾಲನೆ-ಸಾಧಕರಿಗೆ ಗೌರವ

0
144

ಮುಲ್ಕಿ: ಜೆಸಿಐ ಮುಲ್ಕಿ ಶಾಂಭವಿ ಸಂಸ್ಥೆಯ 42ನೇ ವರ್ಷದ ಜೇಸಿ ಸಪ್ತಾಹಕ್ಕೆ ಮುಲ್ಕಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಕಸಾಪ ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ದೀಪ ಬೆಳಗಿಸಿ ಚಾಲನೆ ನೀಡಿದರು.

ಬಡವರ ಕಷ್ಟಗಳನ್ನು ತಿಳಿದುಕೊಂಡು ಸಹಾಯ ಹಸ್ತದ ಮೂಲಕ ವ್ಯಕ್ತಿತ್ವ ವಿಕಸನ ಮಾಡಿದರೆ ಸಂಘ ಸಂಸ್ಥೆ ಹಾಗೂ ದೇಶದ ಅಭಿವೃದ್ಧಿ ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಸಂಸ್ಥೆಯ ಅಧ್ಯಕ್ಷ ಭಾಸ್ಕ‌ರ್ ಶೆಟ್ಟಿಗಾ‌ರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೇಶವಾನಂದ ಸ್ವಾಮೀಜಿ, ಹೊಸ ಅಂಗಣದ ಡಾ. ಹರಿಶ್ಚಂದ್ರ ಪಿ. ಸಾಲ್ಯಾನ್, ಜೇಸಿ ಸಂಸ್ಥೆಯ ಪದಾಧಿಕಾರಿಗಳಾದ ಅಶೋಕ್ ಕುಮಾರ್ ಶೆಟ್ಟಿ, ಎಚ್‌. ವಾಸು ಪೂಜಾರಿ, ಅನಿಲ್ ಕೊಲಕಾಡಿ, ಸತೀಶ್ ಕಿಲ್ಪಾಡಿ, ಕೇಶವ ಸುವರ್ಣ, ಭುಜಂಗ ಕವತ್ತಾರು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಹಸ್ತ ನೀಡಿದ ಕೊಡುಗೈದಾನಿ ಉದ್ಯಮಿ ಜಾನ್ ಕಾಡರ್ಸ್ ರವರನ್ನು ಗೌರವಿಸಲಾಯಿತು. ಅಶೋಕ್ ಕುಮಾರ್ ಶೆಟ್ಟಿ ನಿರೂಪಿಸಿದರು.

LEAVE A REPLY

Please enter your comment!
Please enter your name here