ಶಂಕರಪುರ: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ಕಾಲಭೈರವ ದೇವಸ್ಥಾನದಲ್ಲಿ ಶ್ರೀ ಸಾಯಿ ಈಶ್ವರ್ ಗುರೂಜಿಯವರ ದಿವ್ಯ ಉಪಸ್ಥಿತಿಯಲ್ಲಿ ನವರಾತ್ರಿ ಉತ್ಸವ-೨೦೨೫ ಸಂಭ್ರಮದಿಂದ ಜರಗಲಿದೆ.
ಪ್ರತಿದಿನ ಬೆಳಿಗ್ಗೆ ಶ್ರೀ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ದುರ್ಗಾಪೂಜೆ, ಆರತಿ ಆ ಬಳಿಕ ಭಕ್ತರಿಗೆ ಅನ್ನಪ್ರಸಾದ ನಡೆಯಲಿದೆ. ಸಂಜೆ ೪ ಗಂಟೆಯಿಂದ ಭಜನೆ, ಆರತಿ , ಶಕ್ತಿಪೂಜೆ ನಡೆಯಲಿದೆ. ಸೆ. ೩೦ರಿಂದ ವಿಶೇಷವಾಗಿ ೯ ರಿಂದ ೧೯ ವರ್ಷದ ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣೆ ಜರಗಲಿದೆ.

