ಮೂಡುಬಿದಿರೆ: ಇಲ್ಲಿಯ ಕೊಣಾಜೆಕಲ್ಲು ಪ್ರವಾಸಿ ತಾಣಕ್ಕೆ ಟ್ರಕ್ಕಿಂಗ್ ಬಂದಿದ್ದ ಯುವಕ ಹೃದಯಾಘಾತದಿಂದ ಇಂದು ಬೆಳಗ್ಗೆ ಮೃತಪಟ್ಟ ಘಟನೆ ನಡೆದಿದೆ.
ಪುತ್ತೂರು ಮೂಲದ ಮನೋಜ್ ಎನ್. (25) ಮೃತ ಯುವಕ. ಟ್ರಕ್ಕಿಂಗಿಗೆ ತನ್ನ ಸ್ನೇಹಿತನೊಂದಿಗೆ ಬಂದಿದ್ದು, ಇಂದು ಬೆಳಿಗ್ಗೆ ಕೊಣಾಜೆಕಲ್ಲು ಪ್ರದೇಶದ ಎತ್ತರದ ಸ್ಥಳಕ್ಕೆ ಹೋಗುವಾಗ ಎದೆ ನೋವು ಕಾಣಿಸಿಕೊಂಡಿತು ಎನ್ನಲಾಗಿದೆ. ಗುಡ್ಡದಲ್ಲೇ ಕುಳಿತುಕೊಂಡ ಸಂದರ್ಭದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಹಪಾಠಿ ಉಪಚರಿಸಲು ಯತ್ನಿಸಿದ್ದರು.

