ಬಂಟರು ಸಾಮಾಜಿಕವಾಗಿ ಸಹಭಾಗಿಗಳಾಗಬೇಕು – ಡಾ. ಸದಾಶಿವ ಶೆಟ್ಟಿ

0
91

ಯೆಣ್ಮಕಜೆ ಪಂಚಾಯತು ಬಂಟ್ಸ್ ಸರ್ವಿಸ್ ಸೊಸೈಟಿಯಿಂದ ಬಂಟರಕೂಟ

ಪೆರ್ಲ : ಬಂಟರು ಸಾಮುದಾಯಿಕ ಐಕ್ಯತೆ ಸಾಧಿಸುವ ಮೂಲಕ ಸಮಾಜದ ಆಗು ಹೋಗುಗಳಲ್ಲಿ ಸಹಭಾಗಿಗಳಾಗಬೇಕು. ಕಾಸರಗೋಡು ಜಿಲ್ಲೆಯಲ್ಲಿ ನಿರ್ಮಿಸುವ ಬೃಹತ್ ಬಂಟರ ಭವನದ ನಿರ್ಮಾಣ ಕಾರ್ಯದಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳುವ ಮೂಲಕ ಸಾಮಾಜಿಕ ಐಕ್ಯತೆಯನ್ನು ಪ್ರಕಟಿಸಬೇಕಾಗಿದೆ ಎಂದು ಕೊಡುಗೈದಾನಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ತಿಳಿಸಿದರು‌.

ಅವರು ಇಡಿಯಡ್ಕದಲ್ಲಿ ನಡೆದ ಯೆಣ್ಮಕಜೆ ಪಂಚಾಯತು ಬಂಟ್ಸ್ ಸರ್ವಿಸ್ ಸೊಸೈಟಿಯ ಆಶ್ರಯದ ಬಂಟರ ಕೂಟದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಸಭಾ ಕಾರ್ಯಕ್ರಮವನ್ನು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಐ.ಸುಬ್ಬಯ್ಯ ರೈ ಉದ್ಘಾಟಿಸಿದರು.ಯುಎಇ ಮನಿ ಎಕ್ಸ್ ಚೆಂಜ್ ಮಾಜಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಯೆಣ್ಮಕಜೆ ಅಧ್ಯಕ್ಷತೆವಹಿಸಿದ್ದರು.
ಶೋಭಾ ಶೇಖ, ಮಠದಮೂಲೆ, ಕಾಟುಕುಕ್ಕೆ ಕ್ಷೇತ್ರ ಆಡಳಿತ ಮೊಕೇಸರ ಪದ್ಮನಾಭ ಶೆಟ್ಟಿ, ಚಕ್ಕಿತ್ತಡ್ಕ, ಚಿದಾನಂದ ಆಳ್ವ ಮಂಜಕೊಟ್ಟಿಗೆ, ಜಿಲ್ಲಾ ಬಂಟರ ಸಂಘದ ಸದಸ್ಯ ಬಿ.ಎಸ್. ಗಾಂಭೀರ, ಸದಾನಂದ ಶೆಟ್ಟಿ, ಕುದ್ವ,ಕೊರಗಪ್ಪ ರೈ,ಹರಿಪ್ರಸಾದ್ ಶೆಟ್ಟಿ ರಾಜಾರಾಮ ಶೆಟ್ಟಿ, ಪಟ್ಲ ರಾಜೇಶ್ವರಿ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ. ಸದಾಶಿವ ಶೆಟ್ಟಿ, ಕುಳೂರು ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ. ಮತ್ತು ಪ್ಲಸ್ ಟು ವಿದ್ಯಾರ್ಥಿಗಳನ್ನು ಮತ್ತು ಜಿಲ್ಲಾ ಮಟ್ಟ ಹಾಗೂ ಮೇಲ್ಪಟ್ಟ ವಿಭಾಗದಲ್ಲಿ ಭಾಗವಹಿಸಿದ ಪ್ರತಿಭೆಗಳನ್ನು ಅಭಿನಂದಿಸಲಾಯಿತು.
ನಾರಾಯಣ ಆಳ್ವ, ಯೆಣ್ಮಕಜೆ ಪ್ರಾಸ್ತಾವನೆಗೈದರು.ಶರಶ್ಚಂದ್ರ ಶೆಟ್ಟಿ ಶೇಣಿ ಸ್ವಾಗತಿಸಿ ರಮೇಶ್ಚಂದ್ರ ರೈ ವಂದಿಸಿದರು. ವಾಣಿ ಜಿ. ಶೆಟ್ಟಿ ನಿರೂಪಿಸಿದರು. ಕಾರ್ಯಕ್ರಮದಂಗವಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಯೆಣ್ಯಕಜೆ ಪಂಚಾಯತ್ ಮಹಿಳಾ ಬಂಟ್ಸ್ ಸರ್ವಿಸ್ ಸೊಸೈಟಿ ತಂಡದವರಿಂದ ಭಜನೆ ಜರಗಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಒಳಾಂಗಣ ಕ್ರೀಡೆ ಜರಗಿತು.

LEAVE A REPLY

Please enter your comment!
Please enter your name here