ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ : 42ನೇ ವರ್ಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ : ವಾರ್ಷಿಕ ಮಹಾಸಭೆ

0
133


ವಿಶ್ವಕರ್ಮರು ಜನ ಮಾನ್ಯತೆ ಪಡೆದು ಅಗ್ರಸ್ಥಾನ ಹೊಂದಿದವರು : ನವೀನ್‌ ಆಚಾರ್ಯ

ಹೆಬ್ರಿ : ಆದಿ ಇಲ್ಲ ಅಂತ್ಯ ಇಲ್ಲ, ವಿಶ್ವಕರ್ಮ ನಿಲ್ಲದೇ ಭೂಮಿಯಲ್ಲಿ ಏನೂ ಇಲ್ಲ. ವಿಶ್ವಕರ್ಮರು ಜನ ಮಾನ್ಯತೆಯನ್ನು ಪಡೆದು ಸಮಾಜದಲ್ಲಿ ಅಗ್ರಸ್ಥಾನದಲ್ಲಿ ಇರುವ ಎಲ್ಲಾ ಸಾಮರ್ಥ್ಯವನ್ನು ಹೊಂದಿರುವವರು. ವಿಶ್ವಕರ್ಮರು ಶ್ರೇಷ್ಠತೆಯನ್ನು ಉಳಿಸಿಕೊಂಡು ಮುಖ್ಯವಾಹಿನಿಯಲ್ಲೇ ಇರಬೇಕು ಎಲ್ಲರ ಗಮನ ಸೆಳೆದರು. ಹೆಬ್ರಿ ವಿಶ್ವಕರ್ಮ ಸಂಘದ ಶಿಸ್ತು, ಕಾರ್ಯಕ್ರಮದ ಆಯೋಜನೆ, ವಸ್ತ್ರ ಸಂಹಿತೆ, ಸಾಧಕರನ್ನು ಗುರುತಿಸಿ ಗೌರವಿಸುವಂತಹ ಕಾರ್ಯ ಗಳ ಬಗೆಗೆ ಕಟಪಾಡಿ ತೆಂಕ ಮಾಗಣೆ ಶ್ರೀ ಕಾಳಿಕಾಂಬ ವಿಶ್ವಕರ್ಮೇಶ್ವರ ದೇವಸ್ಥಾನದ ನಿಕಟಪೂರ್ವ ಆಡಳಿತ ಮೋಕ್ತೇಸರ ನವೀನ್‌ ಆಚಾರ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಮಂಗಳವಾರ ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ. ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ಮತ್ತು ಶ್ರೀ ವಿಶ್ವಕರ್ಮ ಯುವ ವೃಂದ ಹೆಬ್ರಿ ಸಹಕಾರದಲ್ಲಿ ನಡೆದ 42ನೇ ವರ್ಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಹಾಗೂ ವಾರ್ಷಿಕ ಮಹಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಹೆಬ್ರಿ ವಿಶ್ವಕರ್ಮ ಸಮಾಜದ ಮುಖಂಡ ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ನ ಹೆಬ್ರಿ ಟಿ.ಜಿ. ಆಚಾರ್ಯ ಮಾತನಾಡಿ ವಿಶ್ವಕರ್ಮ ಜನಾಂಗದ ನಾವು ಶಾಂತಿ ಪ್ರಿಯರು. ಎಲ್ಲರನ್ನು ಒಟ್ಟು ಸೇರಿಸಿಕೊಂಡು ಮುನ್ನಡೆಸುವಂತಹ ಪ್ರಬುದ್ಧತೆಯನ್ನು ಹೊಂದಿರುವವರು. ಅಪ್ರತಿಮ ಸಾಧನೆಯನ್ನು ಮಾಡಿದಂತಹ ಸಾಧಕರಿಗೆ ಸನ್ಮಾನಿಸಿರುವುದು ಅತ್ಯಂತ ಒಳ್ಳೇಯ ಕಾರ್ಯ ಎಂದು ಪ್ರಶಂಸಿದರು.
ಸಂಘದ ಅಧ್ಯಕ್ಷರಾದ ರಾಮಕೃಷ್ಣ ಆಚಾರ್ಯ ಅಧ್ಯಕ್ಷತೆ ವಹಸಿ ಮಾತನಾಡಿ ಸಂಘದ ಅಭಿವೃದ್ಧಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ಎಳಗೋಳಿ ರವೀಂದ್ರ ಪುರೋಹಿತ್‌ ಹೆಬ್ರಿ ಅವರ ಪೌರೋಹಿತ್ಯದಲ್ಲಿ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ನೆರವೇರಿತು. ಸಾಧಕ ವಿದ್ಯಾರ್ಥಿಗಳಾದ ಆಪ್ತಿ ಆಚಾರ್ಯ ಮುನಿಯಾಲು, ವಿನೀಶ್‌ ಆಚಾರ್ಯ ಕೊಳಗುಡ್ಡೆ ಹೆಬ್ರಿ ಹಾಗೂ ನಾಟಿ ವೈಧ್ಯೆ ಶಾರದಾ ಗಣಪತಿ ಆಚಾರ್ಯ ಬೆಳಗುಂಡಿ ಮತ್ತು ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪ್ರೌಢಶಾಲಾ ಶಿಕ್ಷಕ ಹೆಬ್ರಿ ಶಶಿಶಂಕರ್‌ ಹೆಚ್‌ ಎಂ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹೆಬ್ರಿ ರಾಮಕೃಷ್ಣ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಹೆಬ್ರಿ ತಾಲ್ಲೂಕು ಕಚೇರಿ ಮತ್ತು ಭೂಮಾಪನಾ ಇಲಾಖೆಯ ಅಧಿಕಾರಿಗಳು ಮಹೋತ್ಸವದಲ್ಲಿ ಭಾಗವಹಿಸಿದ್ದರು.
ಹೆಬ್ರಿ ವಿಶ್ವಕರ್ಮ ಮಹಿಳಾ ಮಂಡಳಿಯ ಉಪಾಧ್ಯಕ್ಷೆ ಅನುಷಾ, ಯುವ ವೃಂದದ ಅಧ್ಯಕ್ಷ ಸಂತೋಷ ಆಚಾರ್ಯ, ಗ್ರಾಮ ಮೋಕ್ತೇಸರ ಶೇಖರ ಆಚಾರ್ಯ,ಸಮಾಜದ ಹಿರಿಯರಾದ ಟಿ ಜಿ ಆಚಾರ್ಯ, ಸಂಘದ ಗೌರವಾಧ್ಯಕ್ಷ ರತ್ನಾಕರ ಆಚಾರ್ಯ ಶಿವಪುರ, ಸಂಘದ ವಿವಿಧ ಪದಾಧಿಕಾರಿಗಳು ಉಪಸಿತರಿದ್ದರು. ಲೆಕ್ಕಪತ್ರವನ್ನು ಸಂಘದ ಉಪಾಧ್ಯಕ್ಷ ಮುದ್ರಾಡಿ ಕೇಶವ ಆಚಾರ್ಯ ಮಂಡಿಸಿದರು. ಸಂಘದ ಸದಸ್ಯ ರಾಜೇಶ ಆಚಾರ್ಯ ಮಠದ ಬೆಟ್ಟು ಸ್ವಾಗತಿಸಿದರು. ಕಾರ್ಯದರ್ಶಿ ಶಶಿಶಂಕರ್ ಹೆಚ್ಎಂ ನಿರೂಪಿಸಿದರು. ರತ್ನಾಕರ ಆಚಾರ್ಯ ಶಿವಪುರ ವಂದಿಸಿದರು.
ಸಾಧಕರ ಸನ್ಮಾನ ಪತ್ರವನ್ನು ಸಂಘದ ಉಪಾಧ್ಯಕ್ಷರಾದ ಸದಾಶಿವ ಆಚಾರ್ಯ ರಾಗಿಹಕ್ಲು ಹೆಬ್ರಿ. ಸದಸ್ಯರಾದ ಪ್ರಶಾಂತ ಆಚಾರ್ಯ ಮಠದಬೆಟ್ಟು.,ಮಹಿಳಾ ಮಂಡಳಿಯ ಗೌರವ ಸಲಹೆಗಾರರಾದ ಪ್ರೇಮ ಎಂ ವಾಚಿಸಿದರು.

LEAVE A REPLY

Please enter your comment!
Please enter your name here