ಆಮಂತ್ರಣ ಪರಿವಾರದ ಶಿಕ್ಷಕ ಉಪನ್ಯಾಸಕರಿಗೆ ನಡೆದ ಸ್ಪರ್ಧೆಯ ವಿಜೇತರು. ರಾಜ್ಯ ಮಟ್ಟದ ಈ ಸ್ಪರ್ಧೆ ಟುಡೇ ಸ್ಟಾರ್ ಎಂಬ ಹೆಸರಿನಲ್ಲಿ ನಿರಂತರ ಒಂದು ವಾರಗಳ ಕಾಲ ನಡೆದಿತ್ತು.
ವಾರದ ಕೊನೆಯಲ್ಲಿ ಸ್ಪರ್ಧಾ ವಿಜೇತರಿಗೆ ಫೈನಲ್ ಸ್ಪರ್ಧೆ ನಡೆದಿತ್ತು. ಭಾರತಿ ಪರ್ಕಳ ಪ್ರಥಮ ಸ್ಥಾನ ಹಾಗೂ ಸರೀನ್ ತಾಜ್ ಕಾಶಿಪಟ್ಣ, ನ್ಯಾನ್ಸಿ ನೆಲ್ಯಾಡಿ ಮತ್ತು ಶರಣ್ಯ ಬೆಳುವಾಯಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಅಂತಿಮ ಸ್ಪರ್ಧೆಯಲ್ಲಿ ಡಾ.ಸುಮತಿ ಕಾರ್ಕಳ, ಸರ್ವಾಣಿ ಅಳದಂಗಡಿ, ಅಮಿತ ಶಮಂತ್ ಚಿಕ್ಕಮಗಳೂರು, ಸೌಮ್ಯ ಶೆಟ್ಟಿ ಮೂಡುಬಿದಿರೆ ಭಾಗವಹಿಸಿದ್ದರು. ಸ್ಪರ್ಧೆಯ ಜವಬ್ದಾರಿಯನ್ನು ಆಮಂತ್ರಣ ವೆದಿಕೆಯ ಆಶಾ ಅಡೂರು, ಉಮಾ ಸುನಿಲ್ ಹಾಸನ, ಶಿಕ್ಷಕರ ತಂಡದ ಅಡ್ಮಿನ್ ಆತ್ಮ ಕಮಲೇಶ್ ಅಳದಂಗಡಿ ಮತ್ತು ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ವಹಿಸಿದ್ದರು.

