ಉಡುಪಿ: ಬೈಂದೂರು ಪಟ್ಟಣ ಪಂಚಾಯಿತಿ 5.4 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಈ ಪೈಕಿ ಶೇ. 47 ರಷ್ಟು ದಟ್ಟ ಕಾಡು ಪ್ರದೇಶವಾಗಿದೆ. ಗ್ರಾಮೀಣ ಪ್ರದೇಶ ಪಪಂಗೆ ಸೇರ್ಪಡೆಯಿಂದ ಜನರು ಸರ್ಕಾರಿ ಕೆಲಸಕ್ಕೆ ಉಡುಪಿಗೆ ಅಲೆದಾಡುವ ಪರಿಸ್ಥಿತಿ ಇದೆ. ಹೀಗಾಗಿ ಗ್ರಾಮೀಣ ಭಾಗಗಳನ್ನು ಕೈ ಬಿಡುವಂತೆ ಬೈಂದೂರು ತಾಲೂಕು ರೈತ ಸಂದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಆಗ್ರಹಿಸಿದರು.
ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಗ್ರಾಮೀಣ ಭಾಗಗಳನ್ನು ಅವೈಜ್ಞಾನಿಕ ಸೇರ್ಪಡೆ ವಿರೋಧಿಸಿ ಬೈಂದೂರು ತಾಲೂಕು ರೈತ ಸಂದ ನೇತೃತ್ವದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
5 ವರ್ಷದ ಹಿಂದೆ ಸ್ಥಳಿಯರು ಹಾಗೂ ವಿವಿಧ ರಾಜಕೀಯ ಪಕ್ಷಗಳಲ್ಲಿ ಚರ್ಚಿಸದೇ ಅಧಿಕಾರಿಗಳು ಪಟ್ಟಣ ಪಂಚಾಯಿತಿ ರಚಿಸಿದ್ದು, ಇದುವರೆಗೆ ಯಾವುದೇ ಚುನಾವಣೆ ನಡೆದಿಲ್ಲ. ಇದೀಗ ಪಟ್ಟಣ ಪಂಚಾಯಿತಿನ 20 ವಾರ್ಡ್ಗಳಿಗೆ ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಗ್ರಾಮಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿಸಿರುವುದರಿಂದ ರೈತರು ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದರು.
ಸ್ಥಳಿಯ ಅರುಣ್ ಕುಮಾರ್ ಶಿರೂರು ಮಾತನಾಡಿ, ಬೈಂದೂರಿನಲ್ಲಿ 11 ವಾರ್ಡ್ಗಳನ್ನು ಸೇರಿಸಿಕೊಂಡು ಪಟ್ಟಣ ಪಂಚಾಯಿತಿ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಸೆ. 22 ಬೇಡಿಕೆ ಈಡೇರಿಕೆಗಾಗಿ ಬೈಂದೂರಿನಲ್ಲಿ ಆಹೋರಾತ್ರಿ ಧರಣಿ ನಡೆಸುತ್ತೇವೆ. ಸಮಸ್ಯೆ ಇತ್ಯರ್ಥಪಡಿಸದಿದ್ದರೆ ಎಂಎಲ್ಎ, ಎಂಪಿ, ಎಂಎಲ್ಸಿ ಸಹಿತ ಯಾವೊಬ್ಬ ರಾಜಕೀಯ ನಾಯಕರನ್ನು ಗ್ರಾಮಕ್ಕೆ ಬರುವುದಕ್ಕೆ ಬಿಡುವುದಿಲ್ಲ ಎಂದರು.
ಈ ಸಂದರ್ಭ ವೀರಭದ್ರ ಗಾಣಿಗ, ಮ್ಯಾಥ್ಯೂ, ಕೃಷ್ಣ ದೇವಾಡಿಗ, ಸುಭಾಸ್ ಗಂಗಾನಾಡ, ನಾಗಪ್ಪ ಮರಾಠಿ ಮೊದಲಾದವರು ಉಪಸ್ಥಿತರಿದ್ದರು.
Home Uncategorized ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಗ್ರಾಮೀಣ ಭಾಗಗಳನ್ನು ಅವೈಜ್ಞಾನಿಕ ಸೇರ್ಪಡೆ ವಿರೋಧಿಸಿ ಪ್ರತಿಭಟನೆ

