ಕೀರ್ತಿ ಶೇಷರಾದ 60 ಮಂದಿ ಕಾಸರಗೋಡು ಕನ್ನಡ ಹೋರಾಟಗಾರರು, ಮುಖಂಡರ ಭಾವಚಿತ್ರ- ಬದುಕು-ಬರೆಹ ಕುರಿತು ತಮ್ಮ ಕುಟುಂಬಸ್ಥರು ಸಂಕ್ಷಿಪ್ತವಾಗಿ ಮಾಹಿತಿ ಕಳುಹಿಸಲು ವಿನಂತಿ

0
100


ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60ನೇ ವರ್ಷದ ಜನ್ಮ ದಿನಾಚರಣೆ – ಜನ್ಮ ವರ್ಷಾಚರಣೆ ,ಅಭಿನಂದನಾ ಕಾರ್ಯಕ್ರಮವನ್ನು ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ನವಂಬರ್ 4 ಮಂಗಳವಾರದಂದು ಬೆಳಿಗ್ಗೆ ಗಂಟೆ 11.00 ರಿಂದ ರಾತ್ರಿ 9.00 ರ ತನಕ ಆಯೋಜಿಸಲಾಗಿದೆ.
ಕೀರ್ತಿ ಶೇಷರಾದ 60 ಮಂದಿ ಕಾಸರಗೋಡು ಕನ್ನಡ ಹೋರಾಟಗಾರರು, ಮುಖಂಡರ ಭಾವಚಿತ್ರ – ಬದುಕು – ಬರೆಹ ಕುರಿತು ತಮ್ಮ ಕುಟುಂಬಸ್ಥರು ಸಂಕ್ಷಿಪ್ತವಾಗಿ ಮಾಹಿತಿ ಕಳುಹಿಸಲು ವಿನಂತಿಸಲಾಗಿದೆ
ಕರ್ನಾಟಕ ಏಕೀಕರಣ, ಕಾಸರಗೋಡು ವಿಲೀನೀಕರಣಕ್ಕಾಗಿ ಬಹುಕಾಲದಿಂದ ಕನ್ನಡ, ಕನ್ನಡಿಗರ ಹೋರಾಟಗಳಿಗೆ ಹಾಗೂ ಗಡಿನಾಡು ಕಾಸರಗೋಡಿನಲ್ಲಿ ಮಹಾಜನ ಆಯೋಗದ ವರದಿ ಜ್ಯಾರಿಗಾಗಿ ಒತ್ತಾಯಿಸಿ ನಡೆದ ಹಲವು ಕಾಸರಗೋಡು ಸಮ್ಮೇಳನ,ಕಾಸರಗೋಡು ಕನ್ನಡಿಗರ ಸಮ್ಮೇಳನ, ಕನ್ನಡ ಸಮ್ಮೇಳನ ಕನ್ನಡ ಸಮಾವೇಶಗಳನ್ನು ನಿರಂತರವಾಗಿ ಸಂಘಟಿಸಿ, ಕನ್ನಡ ಸಂಘಟನೆಗಳಲ್ಲಿ ಆವಿರತವಾಗಿ ದುಡಿದು , ಯಾವುದೇ ಪ್ರಚಾರ ಬಯಸದೇ ಸೇವೆ ಸಲ್ಲಿಸಿ ಕೀರ್ತಿ ಶೇಷರಾದ 60 ಮಂದಿ ಕನ್ನಡದ ಸತ್ಯಾಗ್ರಹಿಗಳು, ಕನ್ನಡ ಮುಖಂಡರು, ಕನ್ನಡದ ರಾಜಕೀಯ ಪಕ್ಷದ ನೇತಾರರು, ಕನ್ನಡ ಸೇವೆ ಗೈದಿರುವ ಜನಸಾಮಾನ್ಯರ ಭಾವಚಿತ್ರ, ಬದುಕು – ಬರೆಹ ಕುರಿತು ನಮ್ಮ ವಾಟ್ಸ್ ಪ್ ಗೆ ಕಳುಹಿಸಲು ತಮ್ಮ ತಮ್ಮ ಕುಟುಂಬಸ್ಥರು, ಸಮುದಾಯ, ಕುಟುಂಬದ ಪ್ರತಿನಿಧಿಗಳು ಈ ಪ್ರಕಟಣೆಯನ್ನು ಸಂಬಂಧ ಪಟ್ಟವರಿಗೆ ಮಾಹಿತಿಗಳನ್ನು ತಿಳಿಯಪಡಿಸಿ ಸಹಕರಿಸಲು ಮನವಿ ಮಾಡಲಾಗಿದೆ.
ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ನವಂಬರ್ 4 ರಂದು ನಡೆಯುವ ಕಾಸರಗೋಡು ಕನ್ನಡ ಗ್ರಾಮೋತ್ಸವದಲ್ಲಿ ಈ ಮಹನೀಯರ ಭಾವಚಿತ್ರಗಳನ್ನು ಪ್ರದರ್ಶಿಸಿ, ಗೌರವ ಸೂಚಿಸಲಾಗುವುದು.
ಅವರ ಕುಟುಂಬಸ್ಥರ ಒಬ್ಬರಿಗೆ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಿ ಗೌರವಿಸಲು ಯೋಜನೆಯನ್ನು ಕೈಗೊಳ್ಳಲಾಗಿದೆ. ಸಂಬಂಧಪಟ್ಟವರು ತಮ್ಮ ಮಾಹಿತಿಗಳನ್ನು ವಾಟ್ಸ್ ಪ್ ಮೂಲಕ ಕಳುಹಿಸಿ ಸಹಕರಿಸಬಹುದು.
ಸಂಪರ್ಕ ವಿಳಾಸ:- ಶಿವರಾಮ ಕಾಸರಗೋಡು, ಸಂಸ್ಥಾಪಕ ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ ),
ಕನ್ನಡ ಗ್ರಾಮ,
ಕನ್ನಡ ಗ್ರಾಮ ರಸ್ತೆ ಕಾಸರಗೋಡು – 671121
ಮೊಬೈಲ್:-
9448572016,
9901951965
ದಾರಿ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನ ರಸ್ತೆ ಮೀಪುಗುರಿ ಬಸ್ ಸ್ಟಾಪ್ – ಪಾರೆಕಟ್ಟೆ ಕನ್ನಡ ಗ್ರಾಮ

LEAVE A REPLY

Please enter your comment!
Please enter your name here