ಕೆ.ಸೂರಜ್ ಶೆಟ್ಟಿ ನಿರ್ದೇಶನದ ಹೊಸ ಚಿತ್ರಕ್ಕೆ ದುಬೈನಲ್ಲಿ ಮುಹೂರ್ತ

0
51

ದುಬೈ : ಕೆ.ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಹನುಮಾನ್ ಫಿಲ್ಮ್ ನ ಬ್ಯಾನರ್ ನ ಅಡಿಯಲ್ಲಿ ತಯಾರಾಗುವ ಹೊಸ ಚಿತ್ರದ ಮೂಹೂರ್ತ ಕಾರ್ಯಕ್ರಮವು ದುಬೈನಲ್ಲಿ ನೆರವೇರಿತು.
ಯುಎಇ ಬಂಟ್ಸ್ ನ ಶ್ರೀ ಸತ್ಯನಾರಾಯಣ ಪೂಜೆಯ ಸಂದರ್ಭದಲ್ಲಿ ಮೂಹೂರ್ತ ಕಾರ್ಯಕ್ರಮದ ವೈದಿಕ ವಿಧಿ ವಿಧಾನಗಳನ್ನು ಶ್ರೀ ರಘು ಭಟ್ ನೆರವೇರಿಸಿದರು.ಯುಎಇ ಬಂಟ್ಸ್ ನ ಮಹಾ ಪೋಷಕರಾದ ಬಾ.ಬಿ.ಆರ್ ಶೆಟ್ಟಿ, ಸರ್ವೋತ್ತಮ ಶೆಟ್ಟಿ, ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಉದ್ಯಮಿಗಳಾದ ಹರೀಶ್ ಶೇರಿಗಾರ್ ಕ್ಯಾಮೆರಾಕ್ಕೆ ಚಾಲನೆ ನೀಡಿದರು.ನಂತರ ಸಿನಿಮಾದ ಪೋಸ್ಟರನ್ನು ಬಿಡುಗಡೆಗೊಳಿಸಲಾಯಿತು.ಕಾರ್ಯಕ್ರಮದಲ್ಲಿ ಉದ್ಯಮಿ ದಿವಾಕರ ಶೆಟ್ಟಿ,ನಿರ್ದೇಶಕ ಕೆ.ಸೂರಜ್ ಶೆಟ್ಟಿ ,ನಾಯಕ ನಟ ಗೌತಮ್ ಬಂಗೆರ, ಪ್ರೊಡಕ್ಷನ್ ಮ್ಯಾನೇಜರ್ ಕಾರ್ತಿಕ್ ರೈ ಅಡ್ಯನಡ್ಕ,ವಿಶ್ವನಾಥ ಶೆಟ್ಟಿ, ಧೀರಜ್ ಶೆಟ್ಟಿ,ರವಿರಾಜ್ ಶೆಟ್ಟಿ, ಪ್ರೇಮ್ ನಾಥ್ ಶೆಟ್ಟಿ,ರಾಜೇಶ್ ಕುತ್ತಾರ್ ಉಪಸ್ಥಿತರಿದ್ದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ನಿರ್ದೇಶಕ ಕೆ.ಸೂರಜ್ ಶೆಟ್ಟಿ ಚಿತ್ರದ ಚಿತ್ರಿಕರಣವನ್ನು ಡಿಸೆಂಬರ್ ತಿಂಗಳಲ್ಲಿ ನಡೆಸುವುದಾಗಿ ಮತ್ತು ಮಂಗಳೂರು ಹಾಗೂ ದುಬೈನಲ್ಲಿ ಈ ಚಿತ್ರದ ಚಿತ್ರಿಕರಣವನ್ನು ಮಾಡಲಾಗುವುದು.ಚಿತ್ರದಲ್ಲಿ ನಾಯಕನಾಗಿ ಗೌತಮ್ ಬಂಗೆರ, ನಾಯಕಿಯಾಗಿ ವಿನ್ಸೀತಾ ದೀಯಸ್ ಹಾಗೂ ದೀಪಕ್ ರೈ ಪಾನಜೆ,ಮೈಮ್ ರಾಮದಾಸ್ ಹಾಗೂ ತುಳು ಚಿತ್ರರಂಗದ ಹಲವಾರು ಅಭಿನಯಿಸಲಿದ್ದಾರೆ ತಿಳಿಸಿದ್ದರು.
🖋 ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)

LEAVE A REPLY

Please enter your comment!
Please enter your name here