ಶರತ್ಕಾಲದ ಸೂಪರ್ ಮೂನ್

0
90


ಉಡುಪಿ: ಈ ವರ್ಷದ ಹುಣ್ಣಿಮೆ ಸೂಪರ್ ಮೂನ್ಗಳ ಸರದಿ ಪ್ರಾರಂಭವಾಗಿದೆ. ಅಕ್ಟೋಬರ್ 7 ನವಂಬರ್ 5 ,ಹಾಗೂ ಡಿಸೆಂಬರ್ಗಳ 4 ರ ಹುಣ್ಣಿಮೆಗಳೆಲ್ಲ ಸೂಪರ್ಮೂನ್ಗಳನ್ನೂ ಕಾಣಬಹುದು.
ಭೂಮಿ ಹಾಗೂ ಚಂದ್ರರ ಸರಾಸರಿ ದೂರ 3 ಲಕ್ಷದ 84 ಸಾವಿರ ಕಿಮೀ. ಇಂದು ಸುಮಾರು 3 ಲಕ್ಷದ 61 ಸಾವಿರ ಕೀಮೀ ಗೆ ಬರುವ ಚಂದ್ರ ಸುಮಾರು 23 ಸಾವಿರ ಕಿಮೀ ಸಮೀಪ ಬಂದು ಸುಮಾರು 18 ಅಂಶ ದೊಡ್ಡದಾಗಿ ಕಾಣಿಸಲಿದ್ದಾನೆ. ಬೆಳದಿಂಗಳೂ ಹೆಚ್ಚು.
ಹುಣ್ಣಿಮೆಯೇ ಚೆಂದ. ಶರತ್ಕಾಲದ ಆಶ್ವಯುಜ ಆಕಾಶ ಭವ್ಯ. ತಿಳಿ ಬಿಳಿ ತೇಲುವ ಮೋಡಗಳ ಮಧ್ಯೆ ಬೆಳ್ಳಂ ಬೆಳದಿಂಗಳ ಚಂದ್ರಮ ಇನ್ನೂ ಚೆಂದ. ಅದರಲ್ಲೂ ಈಗ ಬಂದಿರುವ ಶರತ್ಕಾಲದಸೂಪರ್ ಮೂನ್ ನ ಬೆಳದಿಂಗಳನ್ನು ಸವಿಯಬೇಕು.
ಅಲ್ಲಲ್ಲಿ ತೇಲುವ ಮಂಜುಗಡ್ಡೆಗಳ ಬಿಳಿ ಹಳದಿ ವರ್ತುಲದ ಹ್ಯಾಲೋ ಕೂಡಾ ಕಾಣ ಸಿಗಬಹುದು. ಪ್ರಕೃತಿಯ ವೈಭವವನ್ನು ಆಸ್ವಾದಿಸಬಹುದು ಎಂದು ಬೌತಶಾಸ್ತ್ರಜ್ಞ ಡಾ.ಎ.ಪಿ ಭಟ್  ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here