ಉಡುಪಿ: ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಆರ್ ಎಸ್ ಎಸ್ ಬಗ್ಗೆ ಮಾತನಾಡುವ ನೈತಿಕತೆ ಮತ್ತು ತಿಳುವಳಿಕೆ ಇಲ್ಲ. ಅವರು ಮುಖ್ಯಮಂತ್ರಿ ಆಗುವ ಚರ್ಚೆ ನಡೆಯುತ್ತಿದೆ. ಡಿಕೆಶಿಯನ್ನು ಸಿದ್ದರಾಮಯ್ಯ ಮುಂದಿನ ವರ್ಷ ಕಾಂಗ್ರೆಸ್ನಿಂದ ಹೊರಗೆ ಹಾಕಿದರೆ ಮತ್ತೆ ಗಣವೇಶ ಧರಿಸಿ ಪಥಸಂಚಲನ ನೋಡುವ ಸಂದರ್ಭ ಬರಬಹುದು. ಡಿಕೆಶಿ ಗಣವೇಶ ಧರಿಸುವುದನ್ನು ನೋಡುವ ಭಾಗ್ಯ ಕರುನಾಡಿಗೆ ಸಿಗಬಹುದು ಎಂದು ಶಾಸಕ ಯಶ್ಪಾಲ್ ಸುವರ್ಣ ವ್ಯಂಗ್ಯವಾಡಿದ್ದಾರೆ.
ಟೀಕೆ ಮಾಡಿದ ಎಲ್ಲರೂ ಆರ್ ಎಸ್ ಎಸ್ ಒಪ್ಪಿಕೊಂಡಿದ್ದಾರೆ. ಡಿಕೆಶಿ ಆರ್ ಎಸ್ ಎಸ್ಗೆ ಬರುವ ದಿನ ದೂರವಿಲ್ಲ. ಪ್ರಧಾನಿ ನರೇಂದ್ರ ಮೋದಿ ಆರ್ ಎಸ್ ಎಸ್ನವರು. ಅವರನ್ನು ಇಡೀ ಪ್ರಪಂಚ ಒಪ್ಪಿದೆ. ಪ್ರಿಯಾಂಕ ರ್ಖಗೆ ಇನ್ನೊಂದು ಜನ್ಮದಲ್ಲಿ ಹುಟ್ಟಿ ಬಂದರೂ ಆರ್ ಎಸ್ ಎಸ್ ಮೇಲೆ ಕ್ರಮ ಸಾಧ್ಯವಿಲ್ಲ. ನಿಷೆೇಧ ಮಾಡುವ ತಾಕತ್ತು ಅವರಿಗಿಲ್ಲ. ಅದು ಸಾಧ್ಯವೂ ಇಲ್ಲ ಎಂದರು.
ರ್ಖಗೆ ಶೈಕ್ಷಣಿಕ ಪ್ರಗತಿಗೆ ಶ್ರಮ ವಹಿಸಲಿ
ಪ್ರಿಯಾಂಕಾ ರ್ಖಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕಲಬುರಗಿ ಎಸ್ ಎಸ್ ಎಲ್ ಸಿ ಪಿಯುಸಿ ಲಿತಾಂಶದಲ್ಲಿ ಕೊನೆ ಸ್ಥಾನದಲ್ಲಿದೆ. ಮುಂದಿನ ವರ್ಷ ಪ್ರಥಮ 5 ಸ್ಥಾನವನ್ನು ಪಡೆಯಲು ಪ್ರಯತ್ನಿಸಲಿ. ಆನಂತರ ನೀವು ರಾಜ್ಯದ ಜನಕ್ಕೆ ಪಾಠ ಮಾಡಲು ಬನ್ನಿ. ಮುಸ್ಲಿಮರನ್ನು ಓಲೈಕೆ ಮಾಡುವ ಇಂತಹ ಹೇಳಿಕೆಯನ್ನು ಬಿಡಬೇಕು. ರ್ಖಗೆ ಪತ್ರ ಪರಿಶೀಲಿಸುವ ಮೊದಲು ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳಲಿ. ಸಿಎಂ ಕೂಡ ಇವತ್ತಲ್ಲ ನಾಳೆ ಆರ್ ಎಸ್ ಎಸ್ ಕಾರ್ಯ ಒಪ್ಪುತ್ತಾರೆ ಎಂದರು.