ವಾಯ್ಸ್ ಆಫ್ ಆರಾಧನ ತಂಡದ ನೇತೃತ್ವದಲ್ಲಿ ರಾಜ್ಯಮಟ್ಟದ ಮಕ್ಕಳ ಹಬ್ಬ

0
294


ವರದಿ ÷ಮಂದಾರ ರಾಜೇಶ್ ಭಟ್

ತುಳುನಾಡು: ಕಟೀಲಿನಲ್ಲಿ ವಾಯ್ಸ್ ವಾಯ್ಸ್ ಆರಾಧನಾ ತಂಡದ ನೇತೃತ್ವದಲ್ಲಿ ದಿನಾಂಕ : 12-10-2025ನೇ ಆದಿತ್ಯವಾರ ಬೆಳಗ್ಗೆ ಗಂಟೆ 8.30ರಿಂದ ಸಂಜೆ 6 ಗಂಟೆವರೆಗೆ ಸರಸ್ವತೀ ಸದನ, ಕಟೀಲು ಇಲ್ಲಿ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ ನಡೆಯಿತು.


ಕುಮಾರಿ ಶ್ರೇಯಾ ಸುಳ್ಯ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂತು ಉದ್ಘಾಟನೆ ಕುಮಾರಿ ಶ್ರೀನಿಧಿ ದೇವಾಡಿಗ ಶಿಮಂತೂರು ನೆರವೇರಿಸಿದರು.
ಕರ್ನಾಟಕದ ವಿವಿಧ ಭಾಗಗಳಿಂದ ಬಂದ ಸುಮಾರು 200ರಷ್ಟು ಮಕ್ಕಳು ಕಟೀಲು ದೇವಿ ಸನ್ನಿಧಿ ಆವರಣದಲ್ಲಿ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದರು. ಜನರು ಚಪ್ಪಾಳೆ ಮುಖಾಂತರ ಅವರನ್ನು ಪ್ರೋತ್ಸಾಹಿಸಿದರು.
ಕಾರ್ಯಕ್ರಮ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಪದ್ಮಶ್ರೀ ಭಟ್ ನಿಡ್ಡೋಡಿ, ಡಾ| ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ ಕಿನ್ನಿಗೋಳಿ, ಡಾ. ರಾಜೇಶ್ ಆಳ್ವ ಬದಿಯಡ್ಕ, ಪ್ರವೀಣ್ ಕುಮಾರ್ ಕೊಡಿಯಾಲ್‌ಬೈಲ್, ಅಗರಿ ರಾಘವೇಂದ್ರರಾವ್ ಸಾಣೂರು ಅರುಣ್ ಶೆಟ್ಟಿಗಾರ್ ಡಾ .ರಾಮಕ್ರಷ್ಣ ಶಿರೂರು , ಚೇತನಾ ಹೆಗಡೆ ಉಪಸ್ಥಿತರಿದ್ದರು ಕಟೀಲಿನ ಅರ್ಚಕರಾದ ಶ್ರೀ ಹರಿನಾರಾಯಣ ಅಸ್ರ್ರಣ್ಣ ಶುಭ ಹಾರೈಸಿದರು.
ಬೆಳಗ್ಗೆ 8.45 ಗಂಟೆ.ಯಿಂದ ಸಾಂಸ್ಕ್ರತಿಕ ಕಾರ್ಯಕ್ರಮಹಾಗು ಮಧ್ಯಾಹ್ನ
ಮಕ್ಕಳ ಕವಿ ಗೋಷ್ಟಿ ಸಂಜೆ ಗಂಟೆ 4.00 ಯಿಂದ ಸಮಾರೋಪ ಸಮಾರಂಭದಲ್ಲಿ ರಾಜೇಶ್ ಸ್ಟೈಲಾರ್ಕ್, ಸದಾನಂದ ನಾರಾವಿ ಚಂದ್ರಹಾಸ ದೇವಾಡಿಗ, ಅರುಣ್ ಶೆಟ್ಟಿಗಾರ್ ಅಜೆಕಾರು, ರಾಮಕೃಷ್ಣ ಶಿರೂರು,
ಸತೀಶ ಅಬನಡ್ಕ ಉಪಸ್ಥಿತರಿದ್ದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮಲ್ಲಿಕಾ ಸುಕೇಶ್, ಅಭಿಷೇಕ್ ಶೆಟ್ಟಿ ಐಕಳ, ದೀನ್ ರಾಜ್ ಕೆ, ಬಸವರಾಜ ಮಂತ್ರಿ, ಕೀರ್ತನ್ ಪೂಜಾರಿ, ಪ್ರಮೀಳಾ ಶೆಟ್ಟಿ ಸುಳ್ಯ,ಚೇತನಾ ರಾಜೇಂದ್ರ ಹೆಗಡೆ, ಭಾಸ್ಕರ ದೇವಾಡಿಗ, ಉಪಸ್ಥಿತರಿದ್ದರು ಶ್ರೇಯಾ ಸುಳ್ಯ, ಸುನೀಕ್ಷ ಮಾರ್ನಾಡು, ಅರ್ಚಿತ್ ಕಶ್ಯಪ್ ಮೂಡುಬಿದಿರೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here