3ನೇ ವರ್ಷದ ಸಂಭ್ರಮದಲ್ಲಿ ಉಪ್ಪಿನಂಗಡಿ ತಿರುಮಲ ಪಟಾಕಿ ಮಳಿಗೆ ಬಡಕುಟುಂಬಕ್ಕೆ  ಆಸರೆಯಾಗುವ ಯೋಜನೆ

0
153

ಉಪ್ಪಿನಂಗಡಿ : ಯಶಸ್ವಿ 3 ನೇ ವರ್ಷದ ಸಂಭ್ರಮದಲ್ಲಿರುವ ಉಪ್ಪಿನಂಗಡಿ ತಿರುಮಲ ಪಟಾಕಿ ಮಳಿಗೆ, ಆಸರೆಯಾಗಬೇಕಾಗಿದೆ ಬಡ ಕುಟುಂಬದ ಒಂದು ಜೀವಕ್ಕೆ, ಇಳoತಿಲ ಗ್ರಾಮದ ನೇಜಿಕಾರು ನಿವಾಸಿಯಾಗಿರುವ ಸೀನ ಶೆಟ್ಟಿ ಹುಟ್ಟು ದಿವ್ಯಾoಗ ಚೇತನರಾಗಿರುವ ತನ್ನ ಇಬ್ಬರು ಸಹೋದರರೊಂದಿಗೆ ಕೇವಲ ಸರ್ಕಾರ ನೀಡುವ ಅಂಗಲವಿಕಲರ ಸಹಾಯಧನದಿಂದ ಜೀವನ ನಡೆಸುತಿದ್ದರು. ವಿಧಿಯಾಟ ಎಂಬಂತೆ ಕಾನೂನಿನ ಕಟ್ಟಲೆಯಲ್ಲಿ ಸೀನ ಶೆಟ್ಟಿಯವರು ತನಗೆ ಆಸರೆಯಾಗಿದ್ದ ಮನೆಯನ್ನು ಕಳೆದುಕೊಂಡಿದ್ದಾರೆ. ಇದನ್ನು ಮನಗಂಡು ತಿರುಮಲ ಪಟಾಕಿ ಮಳಿಗೆಯೂ ವ್ಯಾಪಾರದ ಗಳಿಕೆಯಲ್ಲಿ ಉಳಿದ ಒಂದು ಮೊತ್ತವನ್ನು ಈ ಬಡ ಕುಟುಂಬಕ್ಕೆ ನೀಡುವುದೆಂದು ತೀರ್ಮಾನಿಸಿದ್ದಾರೆ. ದೀಪಾವಳಿಯ ದೀಪದ ಬೆಳಕನ್ನು ನಮ್ಮವರ ಬಾಳಿನಲ್ಲಿ ಬೆಳಕಾಗುವ ಕಾರ್ಯಕ್ಕೆ ನಮ್ಮೊಂದಿಗೆ ಕೈ ಜೋಡಿಸಿ ಎಂದು, ಉಪ್ಪಿನಂಗಡಿ, ಸ್ಟೆಪ್ ಗ್ಯಾಸ್ ಹತ್ತಿರ, ಜ್ಞಾನ ಭಾರತಿ ಶಾಲಾ ಮುಂಭಾಗದ ಬಳಿ ಇರುವ ತಿರುಮಲ ಪಟಾಕಿ ಮಳಿಗೆಯ ಮಾಲಕರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here