ಬಹರೈನ್ ಬಿಲ್ಲವಾಸ್ ವತಿಯಿಂದ “ಗುರು ವಂದನೆ” ಕಾರ್ಯಕ್ರಮ

0
59

ಬಹರೈನ್: ಅನಿವಾಸಿ ಬಿಲ್ಲವರ ಒಕ್ಕೂಟವಾದ “ಬಹರೈನ್ ಬಿಲ್ಲವಾಸ್” ವತಿಯಿಂದ “ಗುರು ವಂದನೆ” ಕಾರ್ಯಕ್ರಮವು ಅಕ್ಟೋಬರ್ 17ರ ಶುಕ್ರವಾರದ ಸಂಜೆ ಕನ್ನಡ ಭವನದ ಸಾಂಸ್ಕ್ರತಿಕ ಸಭಾಂಗಣದಲ್ಲಿ ಜರುಗಲಿದೆ.

ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಶ್ರೀ ಸ್ವಾಮೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜರು ಗುರುವಂದನೆ ಕಾರ್ಯಕ್ರಮಕ್ಕಾಗಿಯೇ ವಿಶೇಷವಾಗಿ ದ್ವೀಪ ರಾಷ್ಟ್ರ ಬಹರೈನ್ ಗೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಗುರುವಂದನೆ ಕಾರ್ಯಕ್ರಮದ ಅಂಗವಾಗಿ ಸ್ವಾಮೀಜಿಯವರಿಂದ ಆಶೀರ್ವಚನ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಮಹೋತ್ಸವ, ಕುಣಿತ ಭಜನೆ ಹಾಗು ಇನ್ನಿತರ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಲಿವೆ.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಯುನೀಕೊ ಸಮೂಹ ಸಸಂಸ್ಥೆಗಳ ಸಿಇಒ ಜಯಶಂಕರ್ ವಿಶ್ವನಾಥನ್ ಅವರು ಭಾಗವಹಿಸಲಿದ್ದು, ವಿಶೇಷ ಅತಿಥಿಗಳಾಗಿ ಕ್ರಿಶ್ಚಿಯನ್ ಧರ್ಮಗುರುಗಳಾದ ಫಾದರ್ ಸಾಜಿ ಥಾಮಸ್ ಹಾಗು ಗೌರವಾನ್ವಿತ ಅತಿಥಿಗಳಾಗಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಮಹಿಳಾ ಘಟಕದ ಅಧ್ಯಕ್ಷೆ ಗೀತಾಂಜಲಿ ಸುವರ್ಣರವರು ಭಾಗವಹಿಸಲಿದ್ದಾರೆ.

ಇಲ್ಲಿನ ಕನ್ನಡ ಸಂಘದ ಅಧ್ಯಕ್ಷರಾದ ಅಜಿತ್ ಬಂಗೇರ ಸೇರಿದಂತೆ ದ್ವೀಪದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮಾತ್ರವಲ್ಲದೆ ಇತರ ಕೊಲ್ಲಿ ರಾಷ್ಟ್ರಗಳ ವಿವಿಧ ಸಂಘಟನೆಗಳ ಅಧ್ಯಕ್ಷರು, ಪಧಾದಿಕಾರಿಗಳು, ಗಣ್ಯರು ಈ ಸಾಂಸ್ಕ್ರತಿಕ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಗುರುವಂದನಾ ಕಾರ್ಯಕ್ರಮವು ಸಂಜೆ 4 ಗಂಟೆಗೆ ಸರಿಯಾಗಿ ಸ್ವಾಮೀಜಿಯವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳುವುದರೊಂದಿಗೆ ಪ್ರಾರಂಭಗೊಂಡು ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮವು ಸಂಪನ್ನಗೊಳ್ಳಲಿದ್ದು, ಕಾರ್ಯಕ್ರಮದ ಕೊನೆಗೆ ಮಹಾಪ್ರಸಾದದ ಅಂಗವಾಗಿ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ದ್ವೀಪದ ಎಲ್ಲಾ ಕನ್ನಡ ಹಾಗು ತುಳು ಸಮುದಾಯದವರಿಗೆ ಈ ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶವಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಬಹರೈನ್ ಬಿಲ್ಲವಾಸ್ ನ ಅಧ್ಯಕ್ಷ ಪ್ರಕಾಶ್ ಅಂಚನ್ ತಿಳಿದ್ದಾರೆ.

LEAVE A REPLY

Please enter your comment!
Please enter your name here