ಅಂಬಲಪಾಡಿಯಲ್ಲಿ ಪ್ರೇಮಿಗಳು ನೇಣು ಬಿಗಿದು ಆತ್ಮಹತ್ಯೆ

0
223

ಉಡುಪಿ: ಪ್ರೇಮಿಗಳಿಬ್ಬರು ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಬಲಪಾಡಿಯ ಕಾಳಿಕಾಂಬ ನಗರದ ಲೇಬರ್ ಕಾಲನಿಯಲ್ಲಿ ಗುರುವಾರ ರಾತ್ರಿ ವೇಳೆ ನಡೆದಿದೆ.

ಪವಿತ್ರ (17) ಹಾಗೂ ಮಲ್ಲೇಶ (23) ಮೃತರು. ಪವಿತ್ರ ಸರಕಾರಿ ಮಹಿಳಾ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಈಕೆಯ ತಾಯಿ ರಾಯಚೂರಿಗೆ ತೆರಳಿದ್ದ ಮೇಲೆ ಮಲ್ಲೇಶ ಮನೆಗೆ ಬಂದಿದ್ದ ಎನ್ನಲಾಗಿದೆ. ಬಳಿಕ ಇವರಿಬ್ಬರೂ ನೇಣಿಗೆ ಶರಣಾಗಿದ್ದಾರೆ.

ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಉಡುಪಿ ನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here