ಪ್ರತಿಷ್ಠಿತ “ಪಾರ್ತಿಸುಬ್ಬ” ರಾಜ್ಯ ಪ್ರಶಸ್ತಿಗೆ ಶ್ರೀ ಕಂದಾವರ ರಘುರಾಮ ಶೆಟ್ಟಿ ಭಾಜನ

0
92


ದಾವಣಗೆರೆ: ಕರ್ನಾಟಕ ಸರ್ಕಾರದ ಯಕ್ಷಗಾನ ಅಕಾಡೆಮಿಯಿಂದ ಹಿರಿಯ ಚೇತನ ಯಕ್ಷಗಾನ, ಪೌರಾಣಿಕ ಪ್ರಸಂಗಕರ್ತರು ಆದರ್ಶ ಶಿಕ್ಷಕರು, ನಾಟಕಕಾರರೂ ಪ್ರಖ್ಯಾತ ಪ್ರಸಿದ್ಧ ಯಕ್ಷಗಾನ ಅರ್ಥದಾರಿಗಳು, ಆರಾಧನ ಕಲೆ ಯಕ್ಷಗಾನದ ಸರ್ವಾಂಗಬಲ್ಲರಾದ ಹಿರಿಯರಿಗೆ, ಕಿರಿಯರಿಗೆ ಮಾರ್ಗದರ್ಶಕರಾದ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕಂದಾವರದ ಯಕ್ಷ ಹಿರಿಯ ಸಾಧಕರಾದ ಕಂದಾವರ ರಘುರಾಮ ಶೆಟ್ಟಿಯವರಿಗೆ ಪ್ರತಿಷ್ಠಿತ “ಪಾರ್ತಿಸುಬ್ಬ” ರಾಜ್ಯ ಪ್ರಶಸ್ತಿಗೆ ಭಾಜನರಾದರು ಎಂದು ದಾವಣಗೆರೆಯ ಯಕ್ಷರಂಗ, ಯಕ್ಷಗಾನ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‌ಶೆಣೈ ತಿಳಿಸಿದ್ದಾರೆ.
ಯಕ್ಷರಂಗ ಅಧ್ಯಕ್ಷರಾದ ಮಲ್ಯಾಡಿ ಪ್ರಭಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾದ ಬೇಳೂರು ಸಂತೋಷ್‌ಕುಮಾರ್ ಶೆಟ್ಟಿ, ಸೇರಿದಂತೆ ಕರಾವಳಿ ಮಿತ್ರ ಮಂಡಳಿಯ ಸರ್ವ ಸದಸ್ಯರು ಹಾಗೂ ಪದಾಧಿಕಾರಿಗಳು ಅಭಿಮಾನದಿಂದ ಶುಭಕೋರಿ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here