
ಮುಲ್ಕಿ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಾಸನ ಸಮೀಪ ಚೌಡೇನಹಳ್ಳಿ ಎಂಬಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಮುಲ್ಕಿಯ ನಿವಾಸಿ ಮಹಿಳೆ ಮೃತಪಟ್ಟರೆ ಕಾರಿನಲ್ಲಿದ್ದ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ
ಮೃತ ಮಹಿಳೆಯನ್ನು ಕಾರ್ನಾಡ್ ಕೆಎಸ್ ರಾವ್ ನಗರ ಕೊರಂಟಬೆಟ್ಟು ನಿವಾಸಿ ಮುಲ್ಕಿ ನಗರ ಪಂಚಾಯತ್ ಮಾಜೀ ಅಧ್ಯಕ್ಷ ದಿ.ಶಶಿಕಾಂತ್ ಶೆಟ್ಟಿ ರವರ ಸಹೋದರಿ ಶಶಿ ಪ್ರಭ (47) ಎಂದು ಗುರುತಿಸಲಾಗಿದ್ದು ಗಾಯಾಳುಗಳಾದ ಕಾರ್ಕಳ ನಿವಾಸಿ ದಿನೇಶ್(34), ಮಂಡ್ಯ ನಿವಾಸಿ ಸುಜನ್(20) ಹಾಗೂ ಕಾರು ಚಾಲಕ ಅಖಿಲ್ (20) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಮೃತ ಶಶಿಪ್ರಭಾ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆಳ್ಳೂರು ಕ್ರಾಸ್ ಬಳಿ ಹೋಟೆಲ್ ಡಾಬಾ ನಡೆಸುತ್ತಿದ್ದು ಭಾನುವಾರ ರಾತ್ರಿ ಹೊತ್ತು ಕಾರಿನಲ್ಲಿ( ಕೆ ಎ 19 ಎಂ ಎಂ.4066) ತಮ್ಮ ಊರಾದ ಮುಲ್ಕಿ ಗೆ ಬರುತ್ತಿರುವಾಗ ರಾತ್ರಿ 1.10 ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಚೌಡೇನಹಳ್ಳಿ ಬಳಿ ರಸ್ತೆಯಲ್ಲಿ ಹಂದಿ ಮೃತಪಟ್ಟಿದ್ದನ್ನ ಗಮನಿಸಿ ಚಾಲಕ ಅಖಿಲ್ ಕಾರನ್ನು ನಿಧಾನ ಮಾಡಿ ಬದಿಗೆ ಸರಿದಿದ್ದರು. ಈ ಸಂದರ್ಭ ಹಿಂದುಗಡೆಯಿಂದ ಬರುತ್ತಿದ್ದ ಫೋರ್ಡ್ ಕಾರು ಅದರ ಚಾಲಕ ಅತೀ ವೇಗದಿಂದ ಹಂದಿಯ ಮೇಲೆ ಕಾರು ಹತ್ತಿಸಿದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಶಶಿಪ್ರಭಾ ರವರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು
ಹೊಡೆದು ನಿಲ್ಲಿಸದೆ ಪರಾರಿಯಾಗಿದೆ
ಅಪಘಾತದ ರಭಸಕ್ಕೆ ಶಶಿಪ್ರಭಾ ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾಗಿದೆ
ಈ ಸಂದರ್ಭ ಕಾರಿನ ಹಿಂಭಾಗದಲ್ಲಿದ್ದ ಶಶಿಪ್ರಭ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.
ಉಳಿದಂತೆ ಕಾರಿನಲ್ಲಿದ್ದವರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.
ಅಪಘಾತದಲ್ಲಿ ಮೃತ ಶಶಿಪ್ರಭಾ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ
ಈ ಬಗ್ಗೆ ಚೆನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬಾಕ್ಸ್ ಮಾಡಬಹುದು……
ಮೃತ ಶಶಿಪ್ರಭ ಹಾಸನದ ಬೆಳ್ಳೂರಿನಲ್ಲಿ ಡಾಬಾ ನಡೆಸುತ್ತಿದ್ದು ಶ್ರಮಜೀವಿಯಾಗಿದ್ದರು
ಆಗಾಗ ತಮ್ಮ ಊರಾದ ಮುಲ್ಕಿಗೆ ಬಂದು ಹೋಗುತ್ತಿದ್ದರು ಅಪಾರ ದೈವ ಭಕ್ತೆಯಾಗಿರುವ ಅವರು ತಮ್ಮ ಸಾವಿನ ಕೊನೆಯ ಕ್ಷಣದ ಅರ್ಧ ಗಂಟೆ ಮೊದಲು ಮುಲ್ಕಿ ಕೊಲಕಾಡಿ ವೇದಮೂರ್ತಿ ವಾದಿರಾಜ ಉಪಾಧ್ಯಾಯರ ಬಳಿ ತಮ್ಮ ಮನೆಯಲ್ಲಿ ಪೂಜೆ ನಡೆಸುವ ಬಗ್ಗೆ ಮಾತನಾಡಿದ್ದರು ಎಂದು ಕೊಲಕಾಡಿ ವಾದಿರಾಜ ಉಪಾಧ್ಯಾಯ ಹೇಳಿ ವಿಧಿಯ ಲೀಲೆ ಬಗ್ಗೆ ದಿಗ್ರಮೆ ವ್ಯಕ್ತಪಡಿಸಿದ್ದಾರೆ

