ಕಾರ್ಕಳ: ಕಾಬೆಟ್ಟು ಬಳಿ ಒಳ ಚರಂಡಿ ವ್ಯವಸ್ಥೆ ಸಂಪೂರ್ಣವಾಗಿ ಅಯೋಮಯ

0
147

ಪುರಸಭೆ ವ್ಯಾಪ್ತಿಯ 21ನೇ ವಾರ್ಡ್ ಕಾಬೆಟ್ಟು ಬಳಿ ಒಳ ಚರಂಡಿ ವ್ಯವಸ್ಥೆ ಸಂಪೂರ್ಣವಾಗಿ ಅಯೋಮಯವಾಗಿದೆ. ಕೆಲವು ಕಡೆ ಬ್ಲಾಕ್ ಆಗಿ ಪಿಟ್ ಮತ್ತು ಛೆoಬರ್
ಸಿಸ್ಟಮ್ಗಳಲ್ಲ ಸೋರಿಕೆ ಆಗುವುದು ಸಹಿತ ಊರು ಇಡೀ ಮಲತ್ಯಜದಿoದ ಮಲೀನವಾಗುತ್ತಿದೆ.
ಕಾಬೆಟ್ಟು ಪರಿಸರದಲ್ಲಿನ ಮೋಹಿನಿ ವಿಲಾಸ್ ಬಿಲ್ಡಿಂಗ್ ಸಮೀಪ ಮಲಿನ ಜಲ ಹರಿದು ಇಡೀ ಪರಿಸರದಲ್ಲಿ ದುರ್ವಾಸನೆ ಹರಡಿ ರೋಗ ಬೀತಿಗೆ ಕಾರಣವಾಗಿದೆ.
ಕೆಲವು ದಿನಗಳಿಂದ ಇಲ್ಲಿನ ನಿವಾಸಿಗಳು ನಿತ್ಯ ನರಕ ಅನುಭವಿಸುತ್ತಿದ್ದಾರೆ.
ಸಮಸ್ಯೆಯಿಂದ ಇಲ್ಲಿನ ಐದಾರು ಕುಟುಂಬಸ್ಥರು ಉಸಿರಾಟಕ್ಕೂ ಹಾಗೂ ಓಡಾಡಲು ಆಹಾರ ಸೇವಿಸಲು ಸಮಸ್ಯೆಯಾಗಿದೆ.
ಪುರಸಭೆಗೆ ಹಲವು ಬಾರಿ ದೂರು ನೀಡಿದರು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ನಿವಾಸಿಗಳ ಅಸಮಾಧಾನ ಹೆಚ್ಚಾಗಿದ್ದು ಮಕ್ಕಳು ಹಿರಿಯರಿಗೆ ಆರೋಗ್ಯದ ಅಪಾಯ ಎದುರಾಗಿದೆ.
ಇಲ್ಲಿನ ಪ್ರೇಮಾನಂದ ಶೆಣೈ ದೀಪ ಶೆಣೈ ದಂಪತಿಯ ಮನೆ ಶೌಚಾಲಯ ಉಪಯೋಗಿಸಿದ ಪರಿಸ್ಥಿತಿ ಉಂಟಾಗಿದೆ. ಚಂಬರ್ ಬ್ಲಾಕ್ ಆದ ಪರಿಣಾಮ ಉಜೆಡ್ ನೀರು ಇವರ ಮನೆಯ ಶೌಚ ಗ್ರಹದ ಪೈಪ್ ಮೂಲಕ ನೀರು ತುಂಬಿಕೊಳ್ಳುತ್ತದೆ. ಇದೇ ರೀತಿ ಕೆಲವು ಮನೆಗಳಲ್ಲಿ ಸಮಸ್ಯೆಯಾಗುತ್ತಿದ್ದರು ಯಾವುದೇ ರೀತಿಯ ಗಂಭೀರ ಕ್ರಮ ಪುರಸಭೆ ತೆಗೆದುಕೊಂಡಿಲ್ಲ ದೂರು ನೀಡಿದಾಗ ಪುರಸಭೆ ಸಿಬ್ಬಂದಿ ಬಂದು ಪರಿಶೀಲನೆ ಮಾಡುತ್ತಾರೆ ಎಲ್ಲಿಯಾದರೂ ಬ್ಲಾಕ್ ಇದೆ ಎಂದು ಸರಿಪಡಿಸಲಾಗುವುದೆಂದು ಸಮಾಧಾನಕರವಾದ ಮಾತನ್ನು ಹೇಳುತ್ತಾರೆ ಪರಿಸರದಲ್ಲಿ ಮತ್ತು ಅದೇ ಸಮಸ್ಯೆ ಮುಂದುವರಿಯುತ್ತದೆ ಎಂದು ಪ್ರೇಮಾನಂದ ಶೆಣೈ ಮಾಧ್ಯಮರೊಂದಿಗೆ ತಮ್ಮ ಅಳಲನ್ನು ಕೂಡಿಕೊಂಡರು ಇದಕ್ಕೆ ಶಾಶ್ವತ ಪರಿಹಾರಕ್ಕೆ ಕ್ರಮ ವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.


LEAVE A REPLY

Please enter your comment!
Please enter your name here