ಉಡುಪಿ: ಭಾರತೀಯರು ಎಲ್ಲಾ ದೇವರು ಮತ್ತು ಗುರುಗಳಲ್ಲಿ ಪೂಜ್ಯ ಭಾವನೆ ಇಟ್ಟುಕೊಂಡಿದ್ದಾರೆ. ಸಂಕುಚಿತ ಮನಸ್ಸಿನಿಂದ ಹೊರಬಂದು ವಿಶಾಲ ದೃಷ್ಟಿಕೋನದಲ್ಲಿ ಅವಲೋಕಿಸಿದಾಗ ಭಗವಂತನನ್ನು ಕಾಣಲು ಸಾಧ್ಯ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಪುತ್ತಿಗೆ ಮಠದ ಆಶ್ರಯದಲ್ಲಿ -ಗೀತಾ ಮಂದಿರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಪುತ್ತಿಗೆ ನೃಸಿಂಹ ಸಭಾಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಡಿಶಾ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀತ್ ಮಾತನಾಡಿ, ಪ್ರಸಿದ್ಧ ಸಂವಿಧಾನ ತಜ್ಞ ಾಲಿ ನಾರಿಮನ್ ಅವರು ಬೇರೆ ಬೇರೆ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಸಂವಿಧಾನದ ಸರಾಸರಿ ಆಯುಸ್ಸು 25 ರಿಂದ 30 ವರ್ಷ ಎಂಬುದಾಗಿ ಬರೆದಿದ್ದಾರೆ. ಆದರೆ ಭಾರತ ಸಂವಿಧಾನ ಭಾರತೀಯ ನಾಗರಿಕತೆಯ ಕಾರಣಕ್ಕಾಗಿ ಇನ್ನೂ ಜೀವಂತವಾಗಿದೆ. ಹೀಗಾಗಿ ಸಂವಿಧಾನ ರಕ್ಷಣೆಗಾಗಿ ಭಾರತೀಯ ಮೌಲ್ಯಗಳನ್ನು ಉಳಿಸಬೇಕು ಎಂದರು.
ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಅಶೀರ್ವಚನ ನೀಡಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ಪಾಲ್ ಸುವರ್ಣ, ಪತ್ರಕರ್ತ ರವೀಂದ್ರ ಜೋಶಿ, ಆರೆಸ್ಸೆಸ್ ಮುಖಂಡ ಶಂಭು ಶೆಟ್ಟಿ, ಪ್ರಮುಖರಾದ ಯು.ಕೆ. ರಾವೇಂದ್ರ ರಾವ್, ರಾಜೇಂದ್ರ ಮಯ್ಯ, ಲಕ್ಷಿ$್ಮಶ್ ಯಡಿಯಾಳ್ ಮೊದಲಾದವರು ಉಪಸ್ಥಿತರಿದ್ದರು. ಮಹಿತೋಷ್ ಆಚಾರ್ಯ ಸ್ವಾಗತಿಸಿ, ಗೋಪಾಲಾಚಾರ್ಯ ಮತ್ತು ಶ್ರೀರಮಣಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.

