ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ- ನಂದಳಿಕೆಯ ನೇತೃತ್ವದಲ್ಲಿ ಸಂಸ್ಥೆಯ ೨೬ನೇ ವರ್ಷಾಚರಣೆ ಅಂಗವಾಗಿ ಅಬ್ಬನಡ್ಕದ ಕುಂಟಲಗುಂಡಿಯಲ್ಲಿ ಗೋಪೂಜೆ ಸಂಭ್ರಮ ಕಾರ್ಯಕ್ರಮ ಜರಗಿತು.

ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ- ನಂದಳಿಕೆಯ ಮಹಿಳಾ ಸದಸ್ಯರು ಹಾಗೂ ಸಂಘದ ಸದಸ್ಯರಿಂದ ಗೋವಿಗೆ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುರೇಶ್ ಅಬ್ಬನಡ್ಕ ವಹಿಸಿ ಮಾತಾನಾಡಿದವರು ಸನಾತನ ಹಿಂದೂ ಸಂಸ್ಕೃತಿಯಲ್ಲಿ ಗೋವುಗಳಿಗೆ ಪಾವಿತ್ರö್ಯ ಸ್ಥಾನವಿದ್ದು ಅವುಗಳು ಮುಕ್ಕೋಟಿ ದೇವರ ಅವಾಸ ಸ್ಥಾನವಾಗಿ ಬಿಂಬಿತವಾಗಿದೆ. ಯಾವ ದೇಶದಲ್ಲಿ ಗೋ ಸಂಪತ್ತನ್ನು ಸಂರಕ್ಷಣೆಗೆ ಒತ್ತು ನೀಡುತ್ತಾರೋ ಆ ದೇಶದಲ್ಲಿ ದಾರಿದ್ರö್ಯ ದೂರವಾಗಿ ಸುಭಿಕ್ಷೆಯಿಂದ ಕಂಗೊಳಿಸಿತ್ತದೆ ಎಂದು ತಿಳಿಸಿದರು.
ತಾಯಿಯ ಹಾಲನ್ನು ಕುಡಿದು ಬೆಳೆವ ನಾವು ಸಾಯುವ ತನಕ ಗೋವಿನ ಹಾಲನ್ನು ಕುಡಿಯುತ್ತೇವೆ. ಕೇವಲ ಲಾಭನಟ್ಟದ ಲೆಕ್ಕಾಚಾರದಲ್ಲಿ ಗೋವನ್ನು ಸಾಕದೆ, ಮನುಕುಲದ ಕಾಮಧೇನುವಾಗಿ ನಾವೆಲ್ಲ ಗೋವನ್ನು ಪೂಜಿಸಬೇಕಾಗಿದೆ ಎಂದು ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ತಿಳಿಸಿದರು.
ಗೋವುಗಳು ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಿದೆ. ಜೀವನ ಪರ್ಯಂತ ನಮಗೆ ಹಾಲುಣಿಸುವ ಗೊಮಾತೆಗೆ ಋಣಿಯಾಗಿ ಬದುಕಬೇಕಿದೆ ಎಂದು ಸಂಘದ ಕಾರ್ಯದರ್ಶಿ ಸತೀಶ್ ಅಬ್ಬನಡ್ಕ ಹೇಳಿದರು.
ಈ ಸಂದರ್ಭದಲ್ಲಿ ಪೂರ್ವಾಧ್ಯಕ್ಷರುಗಳಾದ ಆನಂದ ಪೂಜಾರಿ, ಜೊತೆ ಕಾರ್ಯದರ್ಶಿ ಮಂಜುನಾಥ ಆಚಾರ್ಯ, ಕೋಶಾಧಿಕಾರಿ ಪ್ರದೀಪ್ ಸುವರ್ಣ, ಮಹಿಳಾ ಸಂಘಟನಾ ಕಾರ್ಯದರ್ಶಿ ಸುಲೋಚನಾ ಕೋಟ್ಯಾನ್, ಅಬ್ಬನಡ್ಕ ಭಜನಾ ಮಂಡಳಿಯ ಅಧ್ಯಕ್ಷ ಕೀರ್ತನ್ ಪೂಜಾರಿ, ಅಬ್ಬನಡ್ಕ ಚೆಂಡೆ ಬಳಗದ ಅಧ್ಯಕ್ಷ ಯೋಗೀಶ್ ಆಚಾರ್ಯ, ಸಂಘದ ಸದಸ್ಯರಾದ ಹರೀಶ್ ಪೂಜಾರಿ, ಲೀಲಾ ಪೂಜಾರಿ, ಪದ್ಮಶ್ರೀ ಪೂಜಾರಿ, ಪುಷ್ಪ ಕುಲಾಲ್, ವೀಣಾ ಪೂಜಾರಿ, ಸಂಧ್ಯಾ ಶೆಟ್ಟಿ, ಅನ್ನಪೂರ್ಣ ಕಾಮತ್, ಶಾಂತರಾಮ್ ಕುಲಾಲ್, ಶ್ರೀಕಾಂತ್ ಆಚಾರ್ಯ, ಕಿರಣ್ ಪೂಜಾರಿ, ಸುಭಾಸ್ ಕೆಮ್ಮಣ್ಣು, ಮೊದಲಾದವರಿದ್ದರು.
.

