ಮುಲ್ಕಿ: ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಮೂಲ್ಕಿ ತಾಲೂಕು, ವತಿಯಿಂದ ಮುಲ್ಕಿ ಬಂಟನ ಸಂಘದ ಸಹಯೋಗದೊಂದಿಗೆ ಅಪ್ಪಬೇರ್ ತುಳುನಾಡ್’ ರಾಷ್ಟ್ರೀಯ ತುಳು ವಿಚಾರಗೋಷ್ಠಿಯ ಸ್ವಾಗತ ಸಮಿತಿ ಸಭೆಯು ಮಾ.21ರಂದು ಬೆಳಿಗ್ಗೆ 11 ಗಂಟೆಗೆ ಮುಲ್ಕಿ ಪುನರೂರು ಟೂರಿಸ್ಟ್ ಹೋಮ್ ನ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಲ್ಕಿ ರಾಷ್ಟ್ರೀಯ ತುಳು ವಿಚಾರಗೋಷ್ಠಿ ಸಮಿತಿಯ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಹಾಗೂ ಕಾರ್ಯದರ್ಶಿ ಪುಷ್ಪರಾಜ್ ಚೌಟ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
