ನಾಗರಕಟ್ಟೆ ಶ್ರೀ ಶಾರದಾ ಭಜನಾಶ್ರಮದಿಂದ ಶೃಂಗೇರಿ ಗುರುಪಾದಪೂಜೆ -ಅನುಗ್ರಹ ಪ್ರಾಪ್ತಿ

0
115

ರಾಮಕ್ಷತ್ರಿಯ ಸಮಾಜದ ಪರಮಪೂಜ್ಯ ಗುರುದೇವ ಶ್ರೀ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಗಳವರಿಂದ ಕಾಸರಗೋಡು ಕೋಟೆಯ ಪೂರ್ವ ಭಾಗದಲ್ಲಿನ ನಾಗರಕಟ್ಟೆ ಯಲ್ಲಿ ಸಮಾಜದ ಏಳಿಗೆಗಾಗಿ ಸ್ಥಾಪಿಸಿದ “ಶ್ರೀ ಶಾರದಾ ಭಜನಾಶ್ರಮ ” ಇದರ ಜೀರ್ಣೋದ್ದಾರ, ನೂತನ ನಾಗರಕಟ್ಟೆ, ರಕ್ತೇಶ್ವರಿ ಕಟ್ಟೆ ಪುನರ್ ನಿರ್ಮಾಣ ಹಾಗೂ ಡಿಸೆಂಬರ್ ತಿಂಗಳ ನಾಲ್ಕು, ಐದನೇ ತಾರೀಕಿಗೆ ನಡೆಯುವ ಬ್ರಹ್ಮ ಕಲಶ ಪ್ರಯುಕ್ತ,


ಶೃಂಗೇರಿ ಜಗದ್ಗುರು ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾ ಸ್ವಾಮೀಜಿ ಗಳಿಗೆ ಪಾದಪೂಜೆ, ವಸ್ತ್ರ ಸಂಹಿತೆಯೊಂದಿಗೆ ನೀಡಿ ಪರಮ ಅನುಗ್ರಹ ವನ್ನು ಪಡೆಯಲಾಯಿತು.
ನಾಗರಕಟ್ಟೆ ಶ್ರೀ ಶಾರದಾ ಭಜನಾಶ್ರಮ-ನೂತನ ನಾಗನಕಟ್ಟೆ ಜೀರ್ಣೋದ್ದಾರ ಸಮಿತಿ ಗೌರವ ಅಧ್ಯಕ್ಷ ಶ್ರೀ ಕೆ ನಿರಂಜನ್ (ಕೆ. ಬಿ. ಟಿ.)ಕೊರಕ್ಕೊಡು, ಉಪಾಧ್ಯಕ್ಷ ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್, ಭಜನಾಶ್ರಮ ಪದಾಧಿಕಾರಿ ನವೀನ್ ನಾಯ್ಕ್ ನಾಗರಕಟ್ಟೆ, ಕಾರ್ತಿಕ್ ಕಾಸರಗೋಡು, ಸಂಧ್ಯಾರಾಣಿ ಟೀಚರ್ ಮುಂತಾದವರು ಗುರು ವಂದನೆ ನಡೆಸಿ ಶ್ರೀ ಶೃಂಗೇರಿ ಶ್ರೀ ಶಾರದಾ ಮಾತೆಗೆ ಪೂಜಾ ವಿಧಿಗಳನ್ನು ನೆರವೇರಿಸಿ ಅನುಗ್ರಹ ಪ್ರಾಪ್ತಿ ಮಾಡಿ ಬಂದರು.

LEAVE A REPLY

Please enter your comment!
Please enter your name here