ಬೆಳ್ತಂಗಡಿ ಸಮೀಪದ ಗೇರುಕಟ್ಟೆಯ ಸಂಬೊಳ್ಯ ಮಲ್ಲಿ ನಡೆದಿರುವ ಬಾಲಕನ ನಿಗೂಢ ಕೊಲೆ ಪ್ರಕರಣದ ಹಿಂದೆ ಅನೈತಿಕ ಸಂಬಂಧದ ಕುರಿತ ವ್ಯಾಪಕ ವದಂತಿಗಳು ಹರಡುತ್ತಿವೆ.ಆದರೆ ಹೊಸ ಕನ್ನಡ ವಾರಪತ್ರಿಕೆಗೆ ಸಿಕ್ಕಿರುವ ಮಾಹಿತಿ ಗಳ ಪ್ರಕಾರ ಸುಮಂ ತನ ಕೊಲೆ ಒಬ್ಬಂಟಿ ಯಾಗಿ ವಾಸಿಸುತ್ತಿದ್ದ ಸ್ಥಳೀಯ ವೃದ್ಧ ಬ್ರಾಹ್ಮಣರೋ ರ್ವರ ಮನೆ ದರೋಡೆಗೆತ್ನಿಸಿದ್ದ ತಂಡದ ಕೃತ್ಯವಿರಬಹುದೆ೦ದು ಹೇಳಲಾಗುತ್ತಿದೆ.
ಸುಮಂತನ ಶವ ಸಿಕ್ಕಿರುವ ಕೆರೆ ಹಾಗೂ ತೋಟವು ಬ್ರಾಹ್ಮಣ ಸಮುದಾಯದವರದಾಗಿದೆ. ಆದರೆ ಅವರು ಇನ್ನೊಂದು ಕಡೆ ಜಾಗ ಖರೀದಿಸಿ ಇರುವುದರಿಂದ ಮನೆ ಮಂದಿ ಅಲ್ಲಿ ವಾಸವಿದ್ದರೆ, ಸಂಬೋಳ್ಯದ ಈ ಮನೆಯಲ್ಲಿ ವೃದ್ಧರೂರ್ವರೇ ವಾಸಿಸುತ್ತಿದ್ದಾರೆ ಎನ್ನಲಾಗಿದೆ.
ಅಂದು ಅಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಕೆಲಸಗಾರರೂ ಸಹ ಬೆಳಗ್ಗಿನಿಂದಲೇ ಕೆಲಸಕ್ಕೆ ಬಾರದೆ ರಜೆ ಹಾಕಿದ್ದರು. ಹೀಗಾಗಿ ವೃದ್ಧರೋರ್ವರೇ ಇರುವುದನ್ನು ಖಚಿತಪಡಿಸಿಕೊಂಡ ಸ್ಥಳೀಯ ದರೋಡೆಕೋರರ ತಂಡ ಅಡಿಕೆ ಹಾಗೂ ಇನ್ನಿತರ ವಸ್ತುಗಳನ್ನು ದರೋಡಗೈಯಲು ಆ ನಿರ್ಜನ ಪಂಪ್ ಶೆಡ್ ನಲ್ಲಿ ಕಾದು ಕುಳಿತು ಹೊಂಚು ಹಾಕಿಕೊಂಡಿದ್ದೆನ್ನಲಾಗಿದೆ. ಈ ವೇಳೆ ಧನು ಪೂಜೆಗೆಂದು ಹೊರಟ ಸುಮಂತ್ ಟಾರ್ಚ್ ಹಾಕುತ್ತಾ ಬರುತ್ತಿದ್ದಂತೆ ಶೆಡ್ ನೊಳಗೆ ಅವಿತು ಕುಳಿತಿದ್ದ ತಂಡ ಶೆಡ್ ನೊಳಗೆ ರಾಶಿ ಹಾಕಿದ್ದ ತರೆಗೆಲೆಗಳ ನಡುವೆ ತಲೆಮರೆಸಿಕೊಳ್ಳಲು ಯತ್ನಿ ಸಿತ್ತೆನ್ನಲಾಗುತ್ತಿದೆ.
ಈ ವೇಳೆ ಕೇಳಿಸಿದ ಸದ್ದಿನ ದಿಕ್ಕಿನತ್ತ ಸುಮಂತ್ ಟಾರ್ಚ್ ಹಾಕಿದಾಗ ಟಾರ್ಚ್ ಬೆಳಕಿಗೆ ಕಳ್ಳತನಕ್ಕೆ ಯತ್ನಿಸುತ್ತಿದ್ದವರು ಯಾರು ಎಂದು ಸುಮ೦ತ್ ಗೆ ತಿಳಿದು ಬಂದಿತ್ತೆನ್ನಲಾಗುತ್ತಿದೆ. ಆಗ ಸುಮಂತ್ ಅವರಲ್ಲಿ ಯಾರು ಎಂದು ಪ್ರಶ್ನಿಸುತ್ತಿದ್ದಂತೆ ಕುಂಟಾಕುತ್ತಿದ್ದ ಆ ವ್ಯಕ್ತಿ ಹಿಂದಿನಿಂದ ಬಂದು ಸುಮಂತನ ತಲೆ ಹಿಂಭಾಗಕ್ಕೆ ಕೋಲಿನಿಂದ ಹೊಡೆದಾಗ ಸುಮಂತ್ ನೆಲಕ್ಕೆ ಬಿದ್ದನೆನ್ನಲಾಗುತ್ತಿದೆ. ಆದರೆ ಸುಮಂತ್ ಮತ್ತೆ ಏ ಳಲೆತ್ತಿಸಿದಾಗ ಅದೇ ವ್ಯಕ್ತಿ ಅದೇ ಕೋಲಿನಿಂದ ಮುಂಭಾಗದ ತಲೆಗೂ ಹೊಡೆದಾಗ ಸುಮಂತ್ ಪ್ರಜ್ಞೆ ತಪ್ಪಿರಬಹುದೆಂದು ಶಂಕಿಸಲಾಗುತ್ತಿದೆ.
ಬೆಳಗಿನ ಜಾವ ತೀವ್ರ ಚಳಿಯಾದ ಕಾರಣ ಸ್ವಲ್ಪ ಏಟಾದರೂ ವಿಪರೀತ ನೋವು ಹೆಚ್ಚಾಗುತ್ತದೆ. ಹೀಗಾಗಿ ತಲೆಗೆ ಬಿದ್ದ ಏಟಿನಿಂದ ನೆಲಕ್ಕೆ ಬಿದ್ದು ಪ್ರಜ್ಞೆ ಕಳಕೊಂಡ ಸುಮಂತನನ್ನು ಕೊನೆಗೆ ಪಕ್ಕದ ಕೆರೆಗೆ ಎಸೆದಿರುವ ಶಂಕೆ ಬಲವಾಗಿ ವ್ಯಕ್ತವಾಗುತ್ತಿದೆ ಎನ್ನಲಾಗುತ್ತಿದೆ. ಆದರೆ ಈ ಕೃತ್ಯ ನಡೆಸಿದವರು ಬಹಳ ಚಾಣಾಕ್ಷರಾಗಿರುವ ಸಾಧ್ಯತೆಯಿದೆ.ಹೀಗಾಗಿ ಆರೋಪಿಗಳು ಕೊಲೆ ಕೃತ್ಯದ ಯಾವುದೇ ಕುರುಹುಗಳು ಸಿಗದಂತೆ ಬಳಿಕ ತಪ್ಪಿಸಿಕೊಂಡು ತಲೆಮರೆಸಿಕೊಂಡಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಗೇರುಕಟ್ಟೆ, ಕಳಿಯ ನ್ಯಾಯತರ್ಪು ಗ್ರಾಮಗಳಲ್ಲಿ ಕೆಲವು ವರ್ಷಗಳಿಂದ ಈಚೆಗೆ ಕೆರೆಬಾವಿಗಳಲ್ಲಿ ಶವವಾಗಿ ಪತ್ತೆಯಾಗಿದ್ದ ನಾಲ್ವರ ವ್ಯಕ್ತಿಗಳ ನಿಗೂಢ ಸಾವಿನ ಆರೋಪಿಗಳ ಪತ್ತೆ ಇನ್ನೂ ಕೂಡ ನಡೆದಿಲ್ಲ. ಹೀಗಾಗಿ ಸುಮಂತನ ನಿಗೂಢ ಕೊಲೆ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯವೂ ಸಹಾ ಇದೇ ರೀತಿ ಮರೀಚಿಕೆ ಆಗಬಹುದೋ ಎಂಬ ಅನುಮಾನವನ್ನು ಇದೀಗ ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಈ ಹಿಂದೆ ಗೇರುಕಟ್ಟೆ ಪೇಟೆಗೆ ತಾಗಿಕೊಂಡಿರುವ ಕೆರೆ ಒಂದರಲ್ಲಿ ಓರ್ವ ಹಿಂದಿ ಭಾಷೆ ಮಾತನಾಡುವ ಯುವಕನ ಶವವವೊಂದು ಸಿಕ್ಕಿತ್ತು. ಅದೇ ರೀತಿ ಅನಂತರ ಕೆಲ ಸಮಯಗಳ ಬಳಿಕ ಇದೇ ಕೆರೆಯಲ್ಲಿ ಹಲವು ಪ್ರಕರಣಗಳ ಆರೋಪಿ ಎನ್ನಲಾಗುತ್ತಿರುವ ಫಾರೂಕ್ ಎಂಬಾತನ ಶವವೂ ಸಹ ಇದೇ ರೀತಿ ಸಿಕ್ಕಿರುತ್ತದೆ.
ಇದಾದ ಬಳಿಕ ಇತ್ತೀಚೆಗೆ ಅಂದರೆ ಕಳೆದ ಆಗಸ್ಟ್ ನಲ್ಲಿ ಕಣಿಯೂರು ಗ್ರಾಮದ ಕುಂಡ ಗುರಿ ನಿವಾಸಿ ಕೊರಗು ಎಂಬ ವರ ಪುತ್ರ ಶ್ರೀಧರ ಎಂಬ ವಿವಾಹಿತ ಯುವಕನ ಶವವು ಕೂಡ ಇದೇ ರೀತಿ ಅನುಮಾನ ಆಸ್ಪದವಾಗಿ ಕೆರೆಯ ಒಳಗೆ ಸಿಕ್ಕಿತ್ತು. ಆದರೆ ಈವರೆಗೂ ಈ ಎಲ್ಲಾ ಅಸಹಜ ಸಾವುಗಳ ನಿಜವಾದ ಕಾರಣ ಮತ್ತು ಆರೋಪಿಗಳು ಯಾರೆಂಬುದರ ಬಗ್ಗೆ ಈವರೆಗೂ ತಿಳಿದು ಬಂದಿಲ್ಲ.
ಈ ಎಲ್ಲಾ ಪ್ರಕರಣಗಳ ಮಧ್ಯೆ ಕಳೆದ ಹತ್ತು ದಿನಗಳ ಹಿಂದೆ ವಿಜ್ಞಾನಿಯಾಗಬೇಕೆಂದು ಕನಸು ಕಂಡಿದ್ದ ವಿದ್ಯಾರ್ಥಿ ಸುಮಂತನ ಶವವೂ ಕೂಡ ಇದೇ ರೀತಿ ಸ್ಥಳೀಯ ಕೆರೆಯ ಒಳಗೆ ಪತ್ತೆಯಾಗಿದೆ. ಪೊಲೀಸರು ಆರೋಪಿಗಳ ಪತ್ತೆ ಕಾರ್ಯಕ್ಕಾಗಿ ಹಗಲಿರುಳು ಶತ ಪ್ರಯತ್ನ ನಡೆಸುತ್ತಿದ್ದರೂ ಕೂಡ ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ ಎನ್ನಲಾಗುತ್ತಿದೆ.
ಹೀಗಾಗಿ ಈ ಹಿಂದಿನ ಪ್ರಕರಣಗಳಂತೆ ಸುಮಂತನ ಕೊಲೆ ಪ್ರಕರಣವೂ ಸಹಾ ಹಳ್ಳ ಹಿಡಿದು ಆತನ ನಿಗೂಢ ಸಾವಿಗೆ ನ್ಯಾಯ ಮರೀಚಿಕೆಆಗಬಹುದೇ ನೋ ಮರೀಚಿಕೆ ಆಗಬಹುದೇನೋ ಎಂಬ ಅನುಮಾನವನ್ನು ಇದೀಗ ಈ ಪ್ರದೇಶದ ಜನರೆಲ್ಲರೂ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ.

