ಸಾಂಪ್ರದಾಯಿಕ ಕಂಬಳ ದಿನ ಪ್ರಕಟ

0
62

ಉಡುಪಿ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಐತಿಹಾಸಿಕ ಪ್ರಸಿದ್ಧ ಸಾಂಪ್ರದಾಯಿಕ ಕಂಬಳಗಳು ನೂರಾರು ವರ್ಷದಿಂದ ನಡೆಯುತ್ತಿದ್ದು, ಉಡುಪಿ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿಯು ಈ ವರ್ಷದಲ್ಲಿ ನಡೆಯಲಿರುವ ಕಂಬಳದ ದಿನಾಂಕ ಪ್ರಕಟಿಸಿದೆ.

2025ನೇ ಸಾಲಿನಲ್ಲಿ ನ.21 ಕೊಡೇರಿಯಲ್ಲಿ ಕಂಬಳ ಪ್ರಾರಂಭಗೊಳ್ಳಲಿದ್ದು, ಡಿ.25ರ ತನಕ ನಡೆಲಿದೆ. ಸಂಕ್ರಾಂತಿಯ ನಂತರ ಐತಿಹಾಸ ಪ್ರಸಿದ್ದ ವಂಡಾರು ಕಂಬಳ ಸೇರಿದಂತೆ ಚೇರ್ಕಾಡಿ, ವಡ್ಡಂಬೆಟ್ಟು, ಯಡ್ತಾಡಿ, ಮುದ್ದುಮನೆ, ಹೆಗ್ಗುಂಚೆ, ತಲ್ಲೂರು, ಕಡ್ರಿ ಸಿದ್ದಾಪುರ ನಡೂರು, ಕೊಡವೂರು, ಮಂಡಾಡಿ ಸೇರಿದಂತೆ ಇನ್ನೂ ಹಲವು ಕಂಬಳಗಳ ದಿನಾಂಕಗಳು ನಿಗದಿಯಾಗಲಿದೆ ಎಂದು ಉಡುಪಿ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿಯ ಜಿಲ್ಲಾ ಅಧ್ಯಕ್ಷ ಸುದಾಕರ ಹೆಗ್ಡೆ ಹೇರಂಜೆ ಹಾಗೂ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ತಿಳಿಸಿದ್ದಾರೆ.

ನ.21 – ಕೊಡೇರಿ, 25- ಕೆರಾಡಿ, 27- ಗುಲ್ವಾಡಿ, 28- ಬಾರ್ಕೂರು, 30- ಕಂಜೂರು, ಹೇರಂಜೆ, ಅಲ್ಬಾಡಿ, ಡಿ.1- ಮೂಡ್ಲಕಟ್ಟೆ, 2- ಹೊಸ್ಮಠ, 5- ಬಿಲ್ಲಾಡಿ, 6- ಮೊಳಹಳ್ಳಿ, ಹಂದಾಡಿ, 7- ಹೊರ್ಲಾಳಿ, ತೋನ್ಸೆ, ವೋರ್ವಾಡಿ, 9 – ಚೋರಾಡಿ, ಕುಚ್ಚೂರು, 10 – ಆತ್ರಾಡಿ, ತೆಗ್ಗರ್ಸೆ, 11 – ಹೊಸೂರು, 14- ಬನ್ನಾಡಿ, ಕೊರ್ಗಿ, 25- ಕಡಿಂತಾರ್‌ನಲ್ಲಿ ಕಂಬಳ ನಡೆಯಲಿದೆ.

LEAVE A REPLY

Please enter your comment!
Please enter your name here