ಕಿನ್ನಿಗೋಳಿ: ಐಕಳಬಾವ ಕಾಂತಾಬಾರಿ ಬೂದಾಬಾರೆ ಕಂಬಳ ಸಮಿತಿ ವತಿ ಯಿಂದ ನಡೆಯುವ ಕಂಬಳ ಐಕಳೋತ್ಸವ ಈ ಬಾರಿ 50ನೇ ವರ್ಷದ ಆಚರಣೆ ಯಲ್ಲಿದ್ದು ಇದರ ಪೂರ್ವಭಾವಿ ಸಭೆ ಐಕಳ ಧರ್ಮಚಾವಡಿಯಲ್ಲಿ ಸಮಿತಿಯ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಅನಂತರ ಮಾತನಾಡಿದ ಅವರು 50ನೇ ವರ್ಷದ ಐಕಳ ಕಂಬಳೋತ್ಸವವನ್ನು ಆಚುಸುತ್ತಿದ್ದು, ಸಕಲ ಸಿದ್ಧತೆ ನಡೆಯುತ್ತಿದೆ. 50ನೇ ವರ್ಷದ ಪ್ರಯುಕ್ತ ವಿಶೇಷ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳುತ್ತಿದೆ, ಐಕಳಬಾವದ ಧರ್ಮ ಚಾವಡಿ, ನಾಗಕ್ಷೇತ್ರಗಳು ಸಂಪೂರ್ಣ ಜೀರ್ಣೋದ್ದಾರಗೊಳ್ಳುತ್ತಿವೆ ಎಂದರು. ರಾಜ್ಯ ಕಂಬಳ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಸಮಿತಿಯ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಮುಂಬಯಿ ಸಮಿತಿ ಅಧ್ಯಕ್ಷ ಕುಶಲ ಭಂಡಾರಿ, ಗೌರವಾಧ್ಯಕ್ಷ ಪುರಂದರ ಶೆಟ್ಟಿ ಕಾರ್ಯಾಧ್ಯಕ್ಷ ಚಿತ್ತರಂಜನ್ ಭಂಡಾರಿ, ಪ್ರ.ಕಾರ್ಯದರ್ಶಿ ಸ್ವರಾಜ್ ಶೆಟ್ಟಿ ಮುಂಡೂರು ದೊಡ್ಡಮನೆ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಪಡುಹಿತ್ತು ಸುಕುಮಾರ ಭಂಡಾರಿ, ಸಾಯಿನಾಥ ಶೆಟ್ಟಿ ಮುಂಡೂರು, ಪ್ರಮೋದ್ ಶೆಟ್ಟಿ ದಯೇಶ ಐಕಳ, ಪ್ರದೀಪ್ ರೈ, ರವಿ ಶೆಟ್ಟಿ ಶರತ್ ಸ್ಥಳಂತಗುತ್ತು, ದೇವಿದಾಸ್ ಶ್ರೀ ಕಲ್ವಾ, ಜಯಾಪಾಲ ಶೆಟ್ಟಿ ಸಂಜೀವ ಶೆಟ್ಟಿ ಸ್ಥಳಂತಗುತ್ತು, ಸುಧಾಮ ಶೆಟ್ಟಿ ತಾರಾನಾಥ ಶೆಟ್ಟಿ ಐಕಳ, ಶ್ರೀಶ ಸರಪ್ ಐಕಳ ಮೊದಲಾದವರಿದ್ದರು.

