ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಬ್ಬೆಕೇರಿಯಲ್ಲಿ ಶ್ರೀ ಚೆನ್ನಪ್ಪ ಗೌಡ ಬೈಲಂಗಡಿ ಮತ್ತು ಮನೆಯವರು ನಿರ್ಮಿಸಿದ ಪ್ರಯಾಣಿಕರ ಬಸ್ಸು ತಂಗುದಾಣದ ಉದ್ಘಾಟನೆ, ಪುಣ್ಚತ್ತಾರಿನಲ್ಲಿ ರಿಕ್ಷಾ ತಂಗುದಾಣದ ಇಂಟಲಾಕ್ ಉದ್ಘಾಟನೆ,ನಾವೂರು ದೇವಸ್ಥಾನಕ್ಕೆ 25 ಲಕ್ಷ ರಸ್ತೆ ನಿರ್ಮಾಣಕ್ಕೆ ಗುದ್ದಲಿಪೂಜೆ, ಹಾಗೂ 20 ಲಕ್ಷ ನಾವೂರು ಎಲಡ್ಕ ಅಂಗನವಾಡಿ ಹೊಸ ಕಟ್ಟಡಕ್ಕೆ ಗುದ್ದಲಿಪೂಜೆ ಕಾರ್ಯಕ್ರಮವನ್ನು ನೆರವೇರಿಸಲಾಯಿತ್ತು.
ಈ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯ,ಕೃಷಿ ಸಮಾಜ ಕಡಬ ತಾಲೂಕಿನ ಅಧ್ಯಕ್ಷರು ರಾಕೇಶ್ ರೈ ಕೇಡೆಂಜಿ,ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಗಣೇಶ್ ಕೆ ಎಸ್, ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷರು ವಿಶ್ವನಾಥ ಕೊಪ್ಪ, ಹಾಗೂ ಪ್ರಮುಖ ಗಣ್ಯರಿಂದ ಕಾರ್ಯಕ್ರಮ ನೆರವೇರಿಸಲಾಯಿತು.

