(ಹುಬ್ಬಳ್ಳಿ ಶಹರದ ಮಂಜುನಾಥ ನಗರದಲ್ಲಿರುವ ಸಹಿಪ್ರಾಶಾಲೆಯಲ್ಲಿ ೦೮ ನವೆಂಬರ್ ೨೦೨೫ರಂದು ಭಕ್ತ ಕವಿ ಸಂತ ಕನಕದಾಸರ ೫೩೮ನೇ ಜಯಂತಿ ಆಚರಣೆ)
ಧಾರ್ಮಿಕ ಹಿಂಸೆ ಮತ್ತು ಮತಾಂಧತೆಯನ್ನು ತೊಡೆದು ಭಸರತಿಯರೆಲ್ಲರೂ ಒಂದಾಗಿ ಸಹಬಾಳ್ವೆ ನಡೆಸಲು ಕನಕದಾಸರ ಜೀವನ ಕೀರ್ತನೆಗಳು ನಮಗೆ ದಾರಿ ದೀವಿಯಾಗಿವೆ. ಭಾರತ ಮತ್ತು ಕರ್ನಾಟಕದ ಬಹುತಗವದಲ್ಲಿ ಐಕ್ಯತೆ ಸಾಧುಸಲು ಬಸವಾದಿ ಶರಣರು, ಕಬೀರ ದಾಸ, ಶಿಶುನಾಳ ಶರೀಫರ, ಕನಕಕದಾಸರ ತತ್ವಗಳು ಸಾಮರಸ್ಯಕ್ಕೆ ಜ್ವಲಂತ ನಿದರ್ಶನವಾಗುವೆ ಎಂದು ಶಿಕ್ಷಕ ಸಾಹಿತ್ಯ ಸುಭಾಷ್ ರವರು ಹೇಳಿದರು. ಅವರು ಹುಬ್ಬಳ್ಳಿ ಶಹರದ ಮಂಜುನಾಥ ನಗರದಲ್ಲಿರುವ ಸಹಿಪ್ರಾಶಾಲೆಯಲ್ಲಿ ೦೮ ನವೆಂಬರ್ ೨೦೨೫ರಂದು ಭಕ್ತ ಕವಿ ಸಂತ ಕನಕದಾಸರ ೫೩೮ನೇ ಜಯಂತಿ ಆಚರಣೆ ಆಚರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾವೈಕ್ಯಬಾಳಿನ ಮಹತ್ವ ಮತ್ತು ಜನ ಸಾಮಾನ್ಯರ ಸೇವೆ ಮಾಡುವುದನ್ನು ಕನಕದಾಸತಿಂದ ನಾವು ಕಲಿಯಬೇಕೆಂದು ನುಡಿದರು.ಶಿಕ್ಷಕಿ ವಿಜಯರವರು ಕನಕದಾಸರು ಬರೆದಿರುವ ಹರಿಭಕ್ತಸಾರ, ಮೋಹನ ತರಂಗಿಣಿ, ನಳ ಚರಿತ್ರೆ, ರಾಮಧ್ಯಾನ ಚರಿತ್ರೆಯ ಕೃತಿಗಳ ಸಾರಾಂಶವನ್ನು ಮತ್ತು ಅಲ್ಲಿಯ ಆದರ್ಶಗಳನ್ನ ಅಳವಡಿಸಿಕೊಂಡು ಧನ್ಯಾತಾ ಭಾವ ಬೆಳೆಸಿಕೊಳ್ಳೋಣ ಎಂದರು. ಪ್ರಧಾನಗುರುಗಳಾದ ಹೆಚ್. ಬಿ. ಕೊರವರ ರವರು ನವ ಸಮಾಜದ ನಿರ್ಮಾಣಕ್ಕೆ, ಸಮ ಸಮಾಜ ಕಟ್ಟುವುದಕ್ಕೆ ಕನಕದಾಸರ ಮೌಲ್ಯಗಳು ವಿದ್ಯಾರ್ಥಿಗಳ ಬಾಳಿನಲ್ಲಿ ಅನನ್ಯ ಒಅತ್ರವಹಿಸುತ್ತದೆ ಎಂದು ನುಡಿದರು.
೭ ನೇ ವರ್ಗದ ವಿದ್ಯಾರ್ಥಿನಿ ಅನ್ನಪೂರ್ಣ ಕರಿಗುಂಡಪ್ಪನವರ ಮತ್ತು ಅಜಿತ ಕರಿಗುಂಡಪ್ಪನವರ ಕನಕದಸಾರ ಜೀವನ ವೃತತಾಂತಗಳ ಬಗ್ಗೆ ಕಿರು ಭಾಷಣ ಮಾಡಿದರು. ೪ನೇ ವರ್ಗದ ಹರ್ಷಿತ ಡೊಂಬರ ಶಾಲಾ ಪ್ರಾರ್ಥನಾ ವೇಳೆಯ ಸಚೇತನ ಚಟುವಟಿಕೆಯಂತೆ ಕನಕದಾಸರ ಜೀವನ ಪರಿಚಯ ಮಾಡಿದನು. ನಿನಂತಾಗಬೇಕು ಕನಕದಾಸರ ಕೀರ್ತನೆಗೆ ೬ನೇ ತರಗತಿ ವಿದ್ಯಾರ್ಥಿನಿಯರಾದ ಸನ್ನಿಧಿ ಶೀಪ್ರೀ, ಚೇತನಾ ದೇವರಮನಿ, ರಾಧಾ ಹೊಂಬಳ, ವೈಶಾಲಿ, ಖುಷಿ ನಂದರಗಿ ಇವರು ನೃತ್ಯ ಪ್ರದರ್ಶನ ಮಾಡಿದರು. ೭ನೇ ವರ್ಗದ ಮೇಘಾ ಸುಣಗಾರ, ಶ್ರಾವಂತಿ ನಡಗೇರ, ಸ್ನೇಹಾ ಕಿಳ್ಳಿಕ್ಯಾತರ, ಅನ್ನಪೂರ್ಣ ಹೊಂಬಳ ಇವರು ಭೂಮಿಗೆ ಆರತಿಯನೇತ್ತಿರಿ ನೃತ್ಯ ಪ್ರದರ್ಶಿಸಿದರು.
ಶಿಕ್ಷಕ ಸಾಹಿತಿ ಸುಭಾಷ್ ರವರು ಕನಕನಿಗೇಕೆ ಕುಲದ ಪಟ್ಟ? ಬ ತಮ್ಮ ಸ್ವರಚನೆಯ ಕವಿತೆ ವಾಚಿಸಿ ಮಕ್ಕಳಲ್ಲಿ ಕಾವ್ಯಸಕ್ತಿ ಮೂಡಿಸುದರು. ಕನಕದಾಸರ ಕಿರ್ತನೆಗಳ ಪ್ರಸಿದ್ಧ ಸಾಲುಗಳನ್ನು ಘೋಷಣೆಯ ಮೂಲಕ ಪ್ರಚುರಪಡಿಸಿದರು. ಹಿರಿಯ ಶಿಕ್ಷಕಿ ಸಾವಿತ್ರಿ ಹರನಾಳ, ಶಿಕ್ಷಕ ಪ್ರಕಾಶ ಉಪಸ್ಥಿತರಿದ್ದರು. ನೂರಾರು ವಿದ್ಯಾರ್ಥಿಗಳು, ಪಾಲಕರು ಭಕ್ತ ಕನಕದಾಸರ ಜಯಂತಿ ಯಶಸ್ವಿಗೆ ಸಹಕರಿಸಿದರು. ಸೈನಾಭಿ ನಧಾಫ ಸ್ವಾಗತಿಸಿದರು, ಶಿಕ್ಷಕಿ ಕುಸುಮಾ ಚಕ್ರಸಾಲಿ ನಿರ್ವಹಿಸಿದರು, ಶಿಕ್ಷಕಿ ರೂಪಾ ವಂದಿಸಿದರು, ಶಿಕ್ಷಕಿ ವೇದಾ ನಿರೂಪಿಸಿದರು
