ಗೆಳೆಯರ ಬಳಗ (ರಿ) ಬಲ್ಲಂಗುಡೆಲು ನೂತನ ಸಾರಥಿಗಳ ಆಯ್ಕೆ

0
24

ಮಂಜೇಶ್ವರ : ಗೆಳೆಯರ ಬಳಗ (ರಿ) ಬಲ್ಲಂಗುಡೆಲು ಇದರ ವಾರ್ಷಿಕ ಮಹಾಸಭೆ ಬಲ್ಲಂಗುಡೆಲು ಶ್ರೀ ಕ್ಷೇತ್ರದ ಪರಿಸರದ ಸಂಘದ ಕಟ್ಟಡದಲ್ಲಿ ಸಂಘದ ಅಧ್ಯಕ್ಷರಾದ ಮಾದವ ಉಳಿಯರವರ ಅಧ್ಯಕ್ಷತೆಯಲ್ಲಿ ಜರಗಿತು.
ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರ ಮಂಡನೆ ಮತ್ತು ನೂತನ ಸಮಿತಿಯ ರೂಪಿಕರಣ ನಡೆಯಿತು.ಸಮಿತಿಯ ನೂತನ ಗೌರವ ಅಧ್ಯಕ್ಷರಾಗಿ ರಾಮ್ ಪ್ರಕಾಶ್ ಆಳ್ವ ಪಟ್ಟತ್ತಮೊಗರು, ಅಧ್ಯಕ್ಷರಾಗಿ ಕಾರ್ತಿಕ್ ಶೆಟ್ಟಿ ಮಜಿಬೈಲು,ಉಪಾಧ್ಯಕ್ಷರಾಗಿ ಪ್ರವೀಣ್ ಕುಮಾರ್ ಕರಿಬೈಲು,ಮೋಹನದಾಸ್ ಶೆಟ್ಟಿ ಚಿಗುರುಪಾದೆ, ಪ್ರದಾನ ಕಾರ್ಯದರ್ಶಿಯಾಗಿ ಪ್ರದೀಪ್ ಶೆಟ್ಟಿ ಬಲ್ಲಂಗುಡೆಲು, ಜತೆ ಕಾರ್ಯದರ್ಶಿಯಾಗಿ ಜಗದೀಶ್ ಅಜ್ಜಿಹಿತ್ತಿಲು, ಕೇಶವ ಮಜಿಬೈಲು, ಕೋಶಾಧಿಕಾರಿಯಾಗಿ ಬಶೀರ್ ಮೂಡಂಬೈಲು,ಗೌರವ ಸಲಹೆಗಾರರಾಗಿ ಮೂಸ ಅಜ್ಜಿಹಿತ್ತಿಲು, ಮಾದವ ಉಳಿಯ,ರಾಜೇಶ್ ಬಲ್ಲಂಗುಡೆಲು,ಆನಂದ ಮಜಿಬೈಲು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಸ್ವಾಗತಿಸಿ ಕೋಶಾಧಿಕಾರಿ ಬಶೀರ್ ಮೂಡಂಬೈಲು ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here