ವರದಿ ರಾಯಿ ರಾಜ ಕುಮಾರ
ಮುಲ್ಕಿ ತಾಲೂಕು ಯೋಜನಾ ಸಮಿತಿಯ ಸಭೆ ನವೆಂಬರ್ 12ರಂದು ಮುಲ್ಕಿ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ಮುಲ್ಕಿ ಪುರಸಭೆಯ ಅಧ್ಯಕ್ಷ ಸತೀಶ್ ಅಂಚನ್ ಹಾಜರಿದ್ದರು. ಅಲ್ಲದೆ ಐದು ಮಂದಿ ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳು ತಾಲೂಕು ಯೋಜನಾ ಸಮಿತಿಯ ಯೋಜನೆಯ 26-27 ನೇ ಸಾಲಿನ ಕರಡು ಪ್ರತಿಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಗಳಿಂದ ಕಾರ್ಯರೂಪಕ್ಕೆ ತರಲಾಗುವ ಯೋಜನೆಗಳ ಅಂದಾಜು ಪಟ್ಟಿಯನ್ನು ತಯಾರಿಸಿ ಜಿಲ್ಲಾ ಯೋಜನಾ ಸಮಿತಿಗೆ ಕಳುಹಿಸಲು ಶಿಫಾರಸು ಮಾಡಲಾಯಿತು.


