ಇವರ ಜಂಟಿ ಆಶ್ರಯದಲ್ಲಿ ಚಾಣಕ್ಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ). ಇವರ ವತಿಯಿಂದ
“ವಾಯ್ಸ್ ಆಫ್ ಚಾಣಕ್ಯ- 2025” ಸೀಸನ್ 8. ಇದರ “ಆಯ್ಕೆ ಪ್ರಕ್ರಿಯೆ”ಯು ರೋಟರಿ ಬಾಲ ಭವನ ಅನಂತಶಯನ ಕಾರ್ಕಳ ಇಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮಾತನಾಡಿದ ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಯವರು, ಪ್ರತಿಯೊಬ್ಬರು ತಮಗೆ ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು. ಸತತ ಪ್ರಯತ್ನದಿಂದ ಯಾವುದೇ ಕ್ಷೇತ್ರದಲ್ಲಿ ಮುಂದೆ ಬರಬಹುದು ಎಂದರು. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆಯ ಪ್ರಯತ್ನ ಅಭಿನಂದನೀಯ ಎಂದರು.
ವೇದಿಕೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ ಇಲ್ಲಿನ ಪ್ರಭಾರ ಪ್ರಾಂಶುಪಾಲರಾದ ವಿದ್ಯಾದರ ಹೆಗ್ಡೆ, ಆನ್ಸ್ ಕ್ಲಬ್ಬಿನ ಅಧ್ಯಕ್ಷೆ ಜಯಂತಿ ಆನಂದ ನಾಯಕ್, ತರಬೇತುದಾರರಾದ ರಮ್ಯ ಸುಧೀಂದ್ರ, ಕಬ್ಬಿನ ಕಾರ್ಯದರ್ಶಿ, ಚೇತನ್ ನಾಯಕ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ರೋಟರಿ ಕ್ಲಬ್ಬಿನ ಜಿಲ್ಲಾ ಚೇರ್ಮನ್ ರೇಖಾ ಉಪಾಧ್ಯಾಯ, ಹರ್ಷಿಣಿ ವಿಜಯರಾಜ್ ಶೆಟ್ಟಿ, ಮಮತಾ ಶೆಟ್ಟಿ, ವಿಜೇಂದ್ರ ಕುಮಾರ್, ಕೃಷ್ಣ ಶೆಟ್ಟಿ ಹರಿಶ್ಚಂದ್ರ ಹೆಗ್ಡೆ; ಆನ್ಸ್ ಸದಸ್ಯೆ ರಾದ ದೀಪಾ ಅರುಣ್, ಪದ್ಮಜಾ ಹೆಗ್ಡೆ, ಗಾಯತ್ರಿ ವಿಜೇಂದ್ರ ಉಪಸ್ಥಿತರಿದ್ದರು
ಚಾಣಕ್ಯ ಮೆಲೋಡೀಸ್ ನ ಹಿರಿಯ ಗಾಯಕ ನಿತ್ಯಾನಂದ ಭಟ್ ಪ್ರಾರ್ಥಿಸಿದರು. ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಸಮುದಾಯ ಸೇವಾ ಚೇರ್ಮನ್ ವಸಂತ್ ಎಂ ನಿರೂಪಿಸಿದರು. ವಿಹಾನಾ ಮೆಲೋಡೀಸ್ ನ ನಿರ್ದೇಶಕ ಶಿವಕುಮಾರ್ ವಂದಿಸಿದರು.

