ಜಿಲ್ಲಾ ಕಛೇರಿಯಲ್ಲಿ ಸಂಭ್ರಮಾಚರಣೆ
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್.ಡಿ.ಎ. ಸಂಯುಕ್ತ ಜನತಾದಳ ಮತ್ತು ಬಿ.ಜೆ.ಪಿ., ಇತರೆ ಪಕ್ಷಗಳು ದಾಖಲೆ ಜಯದೊಂದಿಗೆ ನಿಚ್ಚಳ ಬಹುಮತದೊಂದಿಗೆ ಬಿಹಾರದಲ್ಲಿ ಜಯಶೀಲವಾಗಿದ್ದರಿಂದ ಗೆಲುವಿನ ಸಂಭ್ರಮಾಚರಣೆಯನ್ನು ದಾವಣಗೆರೆ ಜಿಲ್ಲಾ ಕಛೇರಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜೆ.ಡಿ.ಯು. ಜಿಲ್ಲಾಧ್ಯಕ್ಷ ಶ್ರೀ ಜಯಣ್ಣ ಹೆಚ್. ಜಿಲ್ಲಾ ಸಂಚಾಲಕರಾದ ಎಂ.ಡಿ. ನೀಲಗಿರಿಯಪ್ಪ, ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಹೆಚ್.ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಡಿ.ಆರ್., ಜಿಲ್ಲಾ ಸಂಘಟನಾ ಸಂಚಾಲಕರಾದ ಕುಮಾರಸ್ವಾಮಿ, ಜಿಲ್ಲಾ ಉಪಾಧ್ಯಕ್ಷರಾದ ಭೀಮಣ್ಣ ಕಾಡಜ್ಜಿ, ಪ್ರಧಾನ ಕಾರ್ಯದರ್ಶಿ ಕಾಯಿಪೇಟೆ ಹಾಲೇಶ್, ದೇವರಾಜ್ ಸೇರಿದಂತೆ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

