ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಬ್ರಹ್ಮಾವರ ಕ್ಕೆ ಆಗಮಿಸಿದ ಶ್ರೀರಾಮ ದಿಗ್ವಿಜಯ ರಥ

0
27

ಉಡುಪಿ; ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಬ್ರಹ್ಮಾವರ , ಇಲ್ಲಿನ  ಶ್ರೀ  ಲಕ್ಷ್ಮಣಪೂರ್ವಜ: ಜಪ ಕೇಂದ್ರದಲ್ಲಿ ನ 14 ರ ಶುಕ್ರವಾರ      ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೆಯ ಸ್ವಾಮೀಜಿಯವ ಮಠ ಪರಂಪರೆಯ  550 ವರ್ಷದ  ಆಚರಣೆಯ  ಪ್ರಯುಕ್ತ  ” ಶ್ರೀರಾಮ ದಿಗ್ವಿಜಯ ರಥ  ” ಬದರಿ ಕ್ಷೇತ್ರ ದಿಂದ ಆರಂಭ ಗೊಂಡು ವಾರಾಣಸಿ , ಅಯೋದ್ಯೆ , ಮುತಾಂದಹ ವಿವಿಧ ಪುಣ್ಯ  ಕ್ಷೇತ್ರ ಗಳಿಗೆ ಭೇಟಿ ನೀಡಿ ಸಾಗಿ ಬಂದ  ” ಶ್ರೀರಾಮ ದಿಗ್ವಿಜಯ ರಥ  “ವನ್ನು ಸತ್ಯನಾಥ ಸ್ಟೋರ್ ಬಳಿ ಪೂರ್ಣ ಕುಂಭ ಸ್ವಾಗತ  , ಮಂಗಳವಾದ್ಯ  , ಚಂಡೆವಾದನ ದೊಂದಿಗೆ  ದೇವಳಕ್ಕೆ ಕರೆತರಲಾಯಿತು.                                                                                                                      ಶ್ರೀ ದೇವರ ಸನ್ನಿಧಿಯಲ್ಲಿ ಸಮೂಹಿಕ ಪ್ರಾರ್ಥನೆ ,ಧಾರ್ಮಿಕ ಪೂಜಾ ಕಾರ್ಯಗಳು ರಾಮಕೃಷ್ಣ ಭಟ್  ,   ಪ್ರಧಾನ ಅರ್ಚಕರು ಬಿ ಪಾಂಡುರಂಗ ಭಟ್  ಮಾರ್ಗದರ್ಶನದಲ್ಲಿ  ಅರ್ಚಕವೃಂದವರು ನೆಡೆಸಿಕೊಟ್ಟರು.                                                                                               ,

 ದೇವರಿಗೆ ವಿಶೇಷ ಅಲಂಕಾರ , ಶ್ರೀ  ರಾಮ ನಾಮ ಜಪ ಪಠಣ ,  ಮಹಾಪೂಜೆ,   ಪ್ರಸಾದ ವಿತರಣೆ,  ಜರಗಿತು. 

ದೇವಳದ  ಆಡಳಿತ ಮೊಕ್ತೇಸರಾದ   ಕೆ ನರೇಂದ್ರ ಪೈಬಿ ಪಿ  ಗೋಪಾಲಕೃಷ್ಣ ಪೈ, ಸತ್ಯನಾಥ ಪೈ  ,  , ಪುರೋಷತ್ತಮ ಪೈ ,    ಅರ್ಚಕ ಕುಟುಂಬಸ್ಥರು ಹಾಗೂ ರಾಮ ನಾಮ ಜಪ ಅಭಿಯಾನ ಸಮಿತಿಯ ಸಂಚಾಲಕ ಬಿ ಪಿ ಮೋಹನದಾಸ ಪೈ   ರಾಮ ನಾಮ ಜಪ ಅಭಿಯಾನ ಸಮಿತಿಯ ಪದಾಧಿಕಾರಿಗಳು  ,  ಜಿ ಎಸ್ ಬಿ  ಮಹಿಳಾ ಮಂಡಳಿ , ಜಿ ಎಸ್ ಬಿ ಯುವಕ  ಮಂಡಳಿಯ ಸದಸ್ಯರು ಸಹಕರಿಸಿದರು ,  ನೂರಾರು ಸಮಾಜಬಾಂಧವರು ಉಪಸ್ಥರಿದ್ದರು. 

LEAVE A REPLY

Please enter your comment!
Please enter your name here